ದಾಂಡೇಲಿ: ಚಾಕಲೇಟು ನೀಡುವ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವ ಇದೀಗ ಪೊಲೀಸರ ಅತಿಥಿ.
ದಾಂಡೇಲಿಯ ಗೌಸ್ ಖಾನ್ ಮಹಮದ್ ಖಾನ್ ಪಠಾಣ್ (50) ಎಂಬಾತ ಬಾಲಕಿಗೆ ಚಾಕಲೇಟು ನೀಡಿ ಮನೆಗೆ ಕರೆದಿದ್ದ. ಬಾಲಕಿ ಆತನ ಮನೆಯೊಳಗೆ ಪ್ರವೇಶಿಸಿದಾಗ ಮೈ-ಕೈ ಮುಟ್ಟಿದ್ದ. ಇದರಿಂದ ಬೆದರಿದ ಬಾಲಕಿ ಆತನಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದು, ಪಾಲಕರಿಗೆ ವಿಷಯ ಮುಟ್ಟಿಸಿದ್ದಳು.
ಬಾಲಕಿ ಹೇಳಿದ ವಿಷಯ ಕೇಳಿ ಆಕೆಯ ಪಾಲಕರು ಕಂಗಾಲಾದರು. ಗೌಸ್ ಖಾನ್ ಮಹಮದ್ ಖಾನ್ ಪಠಾಣ್’ನನ್ನು ವಿಚಾರಿಸಿದಾಗ ಆತನೂ ಉಡಾಫೆಯಿಂದ ವರ್ತಿಸಿದ್ದ. ಹೀಗಾಗಿ ಬಾಲಕಿ ಜೊತೆ ಪೊಲೀಸ್ ಠಾಣೆಗೆ ತೆರಳಿದ ಪಾಲಕರು ಕಾಮುಕನ ಬಗ್ಗೆ ದೂರು ನೀಡಿದರು. ದೂರು ಸ್ವೀಕರಿಸಿದ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದಾರೆ.



