ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಪೊಲೀಸ್ ದಾಳಿ ನಡೆಯುತ್ತಿದ್ದರೂ ಮಟ್ಕಾ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಭಟ್ಕಳದಲ್ಲಿ ಶ್ರೀನಿವಾಸ ನಾಯ್ಕ, ಸಚಿನ್ ನಾಯ್ಕ ಹಾಗೂ ಜೊಯಿಡಾದ ರಾಮನಗರದಲ್ಲಿ ಇರ್ಫಾನ್ ಖಾದರ್ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ.
ಭಟ್ಕಳ ವಿವೇಕಾನಂದ ನಗರ ಬಳಿಯ ತಲಗೇರಿಯಲ್ಲಿ ಚಾಲಕರಾಗಿರುವ ಶ್ರೀನಿವಾಸ ನಾಯ್ಕ ಸಂಶುದ್ಧೀನ್ ಸರ್ಕಲ್ ಬಳಿಯ ಯನಿವರ್ಸಲ್ ಮೆಡಿಕಲ್ ಶಾಫಿನ ಬಳಿ ಮಟ್ಕಾ ಆಡಿಸುತ್ತಿದ್ದಾಗ ಪಿಎಸ್‌ಐ ನವೀನ ನಾಯ್ಕ ದಾಳಿ ನಡೆಸಿದ್ದಾರೆ. ಆ ವೇಳೆ ಜನರಿಂದ ಸಂಗ್ರಹಿಸಿದ 990ರೂ ಹಣ ಸಿಕ್ಕಿದೆ.
ಭಟ್ಕಳ ಮಾರುಕೇರಿಯ ಅಂಗನವಾಡಿ ಬಳಿ ಗೂಡಂಗಡಿ ನಡೆಸುವ ಸಚೀನ ನಾಯ್ಕ ಮೇಲೆ ಪಿಎಸ್‌ಐ ಶಾಂತನಾಥ ಮಸಾನೆ ಅವರು ದಾಳಿ ನಡೆಸಿದಾಗ 610ರೂ ಸಿಕ್ಕಿದೆ. ಜೊಯಿಡಾದ ಕ್ಯಾಸಲ್‌ರಾಕ್ ಬಳಿ ಗೂಡಂಗಡಿ ನಡೆಸುವ ಇರ್ಫಾನ್ ಖಾದರ್ ಮೇಲೆ ರಾಮನಗರ ಪಿಎಸ್‌ಐ ಬಸವರಾಜ ಮಬನೂರು ಅವರು ದಾಳಿ ನಡೆಸಿದಾಗ ಅಲ್ಲಿಯೂ 960ರೂ ಸಿಕ್ಕಿದೆ.
ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದ ಈ ಮೂವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.




