ಕಾರವಾರ: ಸುಭಾಷ್ ಸರ್ಕಲ್ ಬಳಿ ಚಲಿಸುತ್ತಿದ್ದ ಎರಡು ಬೈಕುಗಳ ನಡುವೆ ಅಪಘಾತ ನಡೆದಿದೆ. ಪರಿಣಾಮ ಕೇಬಲ್ ಆಪರೇಟರ್ ಮಧುಕೇಶ್ವರ ನಾಯ್ಕ ಹಾಗೂ ಅವರ ಪುತ್ರ ಮೋಹಿತ ನಾಯ್ಕ ಗಾಯಗೊಂಡಿದ್ದಾರೆ.
ಕಡವಾಡ ಸುಲ್ತಾನಪುರದ ಓಂಕಾರ ನಾಯ್ಕ (28) ಅವರು ಜನವರಿ 12ರ ನಸುಕಿನಲ್ಲಿ ಸವಿತಾ ಸರ್ಕಲಿನಿಂದ ಬಿಲ್ಟ್ ಸರ್ಕಲಿನ ಕಡೆ ಬೈಕಿನಲ್ಲಿ ಚಲಿಸುತ್ತಿದ್ದರು. ಸುಭಾಶ ಸರ್ಕಲ್ ಸುತ್ತುವರೆದ ನಂತರ ಅವರು ಬೈಕಿನ ಮೇಲಿನ ನಿಯಂತ್ರಣ ಕಳೆದುಕೊಂಡರು.
ಇದೇ ವೇಳೆ ಗ್ರೀನ್‌ಸ್ಟೀಟ್ ಬಳಿಯಿಂದ ಬಸ್ ನಿಲ್ದಾಣದ ಕಡೆ ನಂದನಗದ್ದಾ ಟೀಚರ್ಸ ಕಾಲೋನಿಯ ಮಧುಕೇಶ್ವರ ನಾಯ್ಕ ಬೈಕಿನಲ್ಲಿ ಬರುತ್ತಿದ್ದರು. ಅವರ ಜೊತೆ ಮೋಹಿತ್ ನಾಯ್ಕ ಸಹ ಇದ್ದರು. ಮಧುಕೇಶ್ವರ ನಾಯ್ಕರು ಚಲಿಸುತ್ತಿದ್ದ ಬೈಕಿಗೆ ಓಂಕಾರ ನಾಯ್ಕರ ಬೈಕು ಡಿಕ್ಕಿಯಾಯಿತು.
ಈ ಅಪಘಾತದ ಪರಿಣಾಮ ನೆಲಕ್ಕೆ ಬಿದ್ದ ಮಧುಕೇಶ್ವರ ನಾಯ್ಕ ಅವರು ತಲೆ ಹಿಂದೆ ಗಂಭೀರ ಪ್ರಮಾಣದಲ್ಲಿ ಗಾಯ ಮಾಡಿಕೊಂಡರು. ಬಲಗಾಲಿನ ಮಂಡಿ, ಹೆಬ್ಬೆರಳು, ಕೆನ್ನೆಗೆ ಸಹ ಪೆಟ್ಟು ಮಾಡಿಕೊಂಡರು. ಮೋಹಿತ್ ನಾಯ್ಕ ಅವರಿಗೂ ಕೈಗಳಿಗೆ ಗಾಯವಾಯಿತು. ಈ ಅಪಘಾತದ ಬಗ್ಗೆ ಮ್ಯೆಕಾನಿಕ್ ಮಹಮದ್ ಜಾಫರ್ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.



