ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಲಾರಿ ಕಿರವತ್ತಿ ಅರಣ್ಯ ತಪಾಸಣಾ ಕೇಂದ್ರದ ಬಳಿ ಬೈಕಿಗೆ ಡಿಕ್ಕಿಯಾಗಿದೆ. ಇದರ ಪರಿಣಾಮ ಬೈಕಿನ ಹಿಂದೆ ಕೂತಿದ್ದ ಮಹಿಳೆಯೊಬ್ಬರ ಕೈ ತುಂಡಾಗಿ, ಅವರು ಅಲ್ಲಿಯೇ ಸಾವನಪ್ಪಿದ್ದಾರೆ.
ಜನವರಿ 16ರಂದು ಬೈಲಂದೂರಿನ ಜಗ್ಗು ಕೊಕರೆ ಅವರು ತಮ್ಮ ತಾಯಿ ನಾಗುಬಾಯಿ ಅವರ ಜೊತೆ ಬೈಕಿನಲ್ಲಿ ಹೋಗುತ್ತಿದ್ದರು. ಹುಬ್ಬಳ್ಳಿಯಿಂದ ಲಾರಿ ಚಲಾಯಿಸಿಕೊಂಡು ಹೊರಟ ಕಿರವತ್ತಿ ಹದ್ದಿನಸರದ ಬಸವರಾಜ ಕಾಂಬ್ಳೆ ಜಗ್ಗು ಕೊಕ್ಕರೆ ಅವರ ಬೈಕಿಗೆ ಹಿಂದಿನಿAದ ಡಿಕ್ಕಿ ಹೊಡೆದರು.
ಕಿರವತ್ತಿ ಚೆಕ್‌ಪೋಸ್ಟ ಎದುರು ಈ ಅಪಘಾತ ನಡೆದಿದ್ದು, ಬೈಕಿನ ಹಿಂಬದಿ ಕೂತಿದ್ದ ನಾಗುಬಾಯಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಲಾರಿ ಗುದ್ದಿದ ರಭಸಕ್ಕೆ ನಾಗುಬಾಯಿ ಅವರು ಕೈ ತುಂಡಾಗಿದ್ದು, ರಕ್ತದ ಮೊಡವಿನಲ್ಲಿ ಹೊರಳಾಡಿ ಅವರು ಅಲ್ಲಿಯೇ ಸಾವನಪ್ಪಿದರು. ಜಗ್ಗು ಕೊಕ್ಕರೆ ಅವರಿಗೂ ಅಲ್ಲಲ್ಲಿ ಗಾಯಗಳಾಗಿದ್ದು, ಅವರು ಆಸ್ಪತ್ರೆಗೆ ದಾಖಲಾದರು.