ಸರಾಯಿ ಅಂಗಡಿ ಮುಂದೆ ನಿಂತಿದ್ದ ವಾಸ್ತು ತಜ್ಞನಿಗೆ ಅಂಕೋಲೆಯ ನಾಲ್ವರು ಚಳಿ ಬಿಡಿಸಿದ್ದಾರೆ. ವಾಸ್ತುತಜ್ಞನ ಮೇಲೆ ದಾಳಿ ನಡೆಸಿದವರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಬೆಂಗಳೂರಿನ ಬೇಸ್ ವಾಸ್ತು ಇಎನ್‌ಜಿಜಿ ಸರ್ವೀಸ್’ನ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಭಾಕರ ನಾಯ್ಕ ಮೇಲೆ ಅಂಕೋಲಾದ ವಿನಾಯಕ ನಾಯ್ಕ, ನಿತೀಶ ರಾಣ, ರಮೇಶ ನಾಯ್ಕ ಹಾಗೂ ರಾಮಾ ಅಂಕೋಲೆಕರ್ ದಾಳಿ ನಡೆಸಿದ್ದಾರೆ. ಜನವರಿ 16ರಂದು ಈ ದಾಳಿ ನಡೆದಿದೆ.
ಪ್ರಭಾಕರ ನಾಯ್ಕ ಅವರು ಅಂಕೋಲಾ ಗುಡಿಗಾರ ಗಲ್ಲಿಯ ಅಪಲೋ ಬಾರ್ ಅಂಗಡಿಯಲ್ಲಿದ್ದರು. ಆಗ ಅಲ್ಲಿಗೆ ಬಂದ ನಾಲ್ವರು ಏಕಾಏಕಿ ಅವರನ್ನು ಥಳಿಸಲು ಶುರು ಮಾಡಿದರು. ಈ ವೇಳೆ ಪ್ರಭಾಕರ ನಾಯ್ಕ ಅವರನ್ನು ಕೆಟ್ಟದಾಗಿ ಬೈದು ನಿಂದಿಸಿದರು.
ಆ ನಾಲ್ವರ ದಾಳಿಯಿಂದ ಪ್ರಭಾಕರ ನಾಯ್ಕ ಅವರ ಕಣ್ಣಿಗೆ ಗಾಯವಾಗಿದೆ. ತಲೆಗೆ ಸಹ ಪೆಟ್ಟಾಗಿದೆ. ಈ ಹಿನ್ನಲೆ ಅವರು ನಾಲ್ವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಈ ಹೊಡೆದಾಟಕ್ಕೆ ಕಾರಣವನ್ನು ಅವರು ತಿಳಿಸಿಲ್ಲ. ಎದುರುದಾರರು ಈವರೆಗೆ ಸತ್ಯ ಬಾಯ್ಬಿಟ್ಟಿಲ್ಲ.