ತಮ್ಮ ಪರಿಚಯದಲ್ಲಿ ಯಾರಿಗೆ ನೋವಾದರೂ.. ಯಾರ ಮನೆಯಲ್ಲಿ ಸಾವಾದರೂ ಅಲ್ಲಿ ಪ್ರಮೋದ ಹೆಗಡೆ ಹಾಜರು. ಕಷ್ಟ ಎಂದು ಯಾರೇ ಅವರ ಬಳಿ ಬಂದರೂ ಅವರಿಗೆ ನೆರವಾಗುವುದು ಪ್ರಮೋದ ಹೆಗಡೆ ಅವರ ಹುಟ್ಟು ಗುಣ.
ಪರಿಚಯಸ್ಥರ ಮದುವೆ-ಮುಂಜಿಗಳಿಗೂ ಮುಂಚಿತವಾಗಿ ತೆರಳಿ ಅಲ್ಲಿನ ಆಗು-ಹೋಗುಗಳಿಗೆ ಸ್ಪಂದಿಸುವುದು ಪ್ರಮೋದ ಹೆಗಡೆ ದಂಪತಿಗೆ ಮೊದಲಿನಿಂದಲೂ ಬಂದ ರೂಢಿ. ಕುಮಟಾದ ಹೆಗಡೆಯ ಪ್ರಮೋದ ಹೆಗಡೆ ಹವ್ಯಕ ಸಮಾಜಕ್ಕಾಗಿ ವಿಶಿಷ್ಟವಾದ ಸೇವೆ ಸಲ್ಲಿಸುತ್ತಿದ್ದಾರೆ. ಪುಟ್ಟದೊಂದು ಅಂಗಡಿ ಹೊಂದಿರುವ ಅವರು ತಮ್ಮ ನಿತ್ಯದ ದಿನಚರಿಯಲ್ಲಿ ನೂರಾರು ಜನರಿಗೆ ನೆರವಾಗುತ್ತಾರೆ.
ಕುಟುಂಬ ಯೋಜನಾ ಸಂಘದ ನಿವೃತ್ತ ಉದ್ಯೋಗಿ ಜಿ ಕೆ ಭಟ್ಟ ಸೂರಿ ಅವರು ಹೊಸ ಮನೆ ನಿರ್ಮಿಸಿ ಗೃಹ ಪ್ರವೇಶ ಮಾಡಿದ್ದು, ಅಲ್ಲಿಯೂ ಪ್ರಮೋದ ಹೆಗಡೆ ದಂಪತಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿದರು. ಅವರ ಈ ಗುಣದ ಬಗ್ಗೆ ಗುಣಗಾನ ಮಾಡಿದ ಜಿ ಕೆ ಭಟ್ಟ ಸೂರಿ ಅವರು ಪ್ರಮೋದ ಹೆಗಡೆ ದಂಪತಿಯನ್ನು ಗೌರವಿಸಿದರು.



