ಚಲಿಸುತ್ತಿರುವ ರೈಲಿಗೆ ತಲೆ ಅಡ್ಡವಿಟ್ಟ ಪರಿಣಾಮ ವ್ಯಕ್ತಿಯೊಬ್ಬದ ದೇಹ ಎರಡು ತುಂಡಾಗಿದೆ. ಆತನ ತಲೆ ಹಾಗೂ ದೇಹ ಎರಡು ಭಾಗವಾಗಿ ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದು, ಅದನ್ನು ನೋಡಿದ ರೈಲ್ವೆ ಮಾಸ್ಟರ್ ಮಹೇಶ್ವರ ನಾಯ್ಕ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಕಾರವಾರದ ಕೊಂಕಣ ರೈಲ್ವೆ ಮಾರ್ಗದಲ್ಲಿ ಜನವರಿ 19ರ ರಾತ್ರಿ ಸಂಚರಿಸುತ್ತಿದ್ದ ರೈಲಿಗೆ ಅಪರಿಚಿತ ಪುರುಷನೊಬ್ಬ ತಲೆ ಅಡ್ಡವಿಟ್ಟು ಮಲಗಿದ್ದು, ರೈಲು ಆತನ ಮೇಲೆ ಸಂಚರಿಸಿದೆ. ಕಡವಾಡ-ನಂದವಾಳ ಬಳಿಯ ಗೂಡ್ಸ ರೈಲು ಡಿಕ್ಕಿಯಾದ ಪರಿಣಾಮ ಆ ಅಪರಿಚಿತ ಅಲ್ಲಿಯೇ ಕೊನೆ ಉಸಿರೆಳೆದಿದ್ದಾನೆ.
ಈ ವಿಷಯ ಮೊದಲು ರೈಲು ಓಡಿಸುತ್ತಿದ್ದ ಲೋಕೋ ಫೈಲೆಟ್ ಅರಿವಿಗೆ ಬಂದಿದೆ. ಅವರು ಕಾರವಾರ ರೈಲ್ವೆ ಮಾಸ್ಟರ್’ಗೆ ವಿಷಯ ಮುಟ್ಟಿಸಿದ್ದಾರೆ. ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ ರೈಲ್ವೆ ಮಾಸ್ಟರ್ ಮಹೇಶ್ವರ ನಾಯ್ಕ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಅಂದಾಜು 50 ವರ್ಷದ ಅಪರಿಚಿತನ ವಾರಸುದಾರರ ಹುಡುಕಾಟ ಮುಂದುವರೆದಿದೆ. ಆತನ ಆತ್ಮಹತ್ಯೆಗೆ ಕಾರಣವೂ ಗೊತ್ತಾಗಿಲ್ಲ.



