6 Skip to content

ಅರಣ್ಯ ಅತಿಕ್ರಮಣ: ಶೆಡ್’ಗೆ ಅಳವಡಿಸಿದ್ದ ತಗಡು ಇಲಾಖೆ ಪಾಲು!

ಯಲ್ಲಾಪುರ: ಚಿಪಗೇರಿಯಿಂದ ಕಂಚಿಕೊಪ್ಪಕ್ಕೆ ಹೋಗುವ ರಸ್ತೆ ಪಕ್ಕದ ಅರಣ್ಯದಲ್ಲಿ ಪ್ರೀತಿ ಸಿದ್ದಿ ಹಾಗೂ ಮಬ್ಲೆಶ್ವರ ಸಿದ್ದಿ ನಿರ್ಮಿಸುತ್ತಿದ್ದ ಶೆಡ್’ನ್ನು ಅರಣ್ಯಾಧಿಕಾರಿಗಳು ಧ್ವಂಸ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಅವರು ಅಲ್ಲಿ ಶೆಡ್ ನಿರ್ಮಿಸುತ್ತಿದ್ದರು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದಿದ್ದು, ಇಲ್ಲಿನ ಅಧಿಕಾರಿಗಳು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ತಗಡು ಅಳವಡಿಸುವವರೆಗೂ ಸುಮ್ಮನಿದ್ದ ಅರಣ್ಯ ಸಿಬ್ಬಂದಿ, ಜೂ 18ರ ರಾತ್ರಿ ಶೆಡ್’ಗೆ ಮಾಡು ಮಾಡುತ್ತಿದ್ದಾಗ ದಿಢೀರ್ ಮಾಡಿ ಅತಿಕ್ರಮಣ ತೆರವು ಮಾಡಿದ್ದಾರೆ. ಅತಿಕ್ರಮಣದಾರರು ದುಡ್ಡು ಕೊಟ್ಟು ಖರೀದಿಸಿದ್ದ ತಗಡನ್ನು ಅರಣ್ಯ ಇಲಾಖೆಯ ವಶವಾಗಿದೆ. ಈ ವೇಳೆ ಅತಿಕ್ರಮಣ ನಡೆಸಿದವರು ವಾಗ್ವಾದಕ್ಕಿಳಿದಿದ್ದು, ಅವರ ವಿರುದ್ಧ ಹೊಸ ಅತಿಕ್ರಮಣದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a comment

Leave a Reply

You cannot copy content of this page