ಹಿಂದು ಧರ್ಮದವರ ಧಾರ್ಮಿಕ ಭಾವನೆ ಕೆದಕುವವರಿಗೆ ನ್ಯಾಯವಾದಿ ನಾಗರಾಜ ನಾಯಕ ಖಡಕ್ ಎಚ್ಚರಿಕೆ ನೀಡಿದ್ದಾರೆ. `ಸನಾತನ ಧರ್ಮದಲ್ಲಿ ಗೋವನ್ನು ಮಾತೆ ಎಂದು ನಂಬಲಾಗಿದ್ದು, ನಮ್ಮ ಮಾತೆಯ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ’ ಎಂದು ಅವರು ಗುಡುಗಿದ್ದಾರೆ.
`ಹೊನ್ನಾವರದಲ್ಲಿ ಹಸು ಕೊಂದ ಘಟನೆ ಅಮಾನುಷವಾಗಿದೆ. ಜಿಹಾದಿ ಮನಸ್ಸಿನ ಸಂಸ್ಕೃತಿ ಉತ್ತರ ಕನ್ನಡದಲ್ಲಿ ಬೇರು ಬಿಡಲು ಕೊಡುವ ಪ್ರಶ್ನೆಯೇ ಇಲ್ಲ. ಇಂತಹ ಕೆಟ್ಟ ಸಂಸ್ಕೃತಿಯನ್ನು ನಾಶ ಪಡಿಸುವಿಕೆ ಅನಿವಾರ್ಯ’ ಎಂದವರು ಹೇಳಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲೂ ಸನಾತನ ಸಂಸ್ಕೃತಿ ಇರಬೇಕು. ಇಲ್ಲಿ ಜಿಹಾದಿ ಸಂಸ್ಕೃತಿ ಹೇರಲು ಯಾವುದೇ ಕಾರಣಕ್ಕೂ ಬಿಡುವದಿಲ್ಲ’ ಎಂದು ನ್ಯಾಯವಾದಿ ನಾಗರಾಜ ನಾಯಕ ಹೇಳಿದರು.
`ನಮ್ಮ ಗೋ ಮಾತೆಯನ್ನು ನಾವು ರಕ್ಷಣೆ ಮಾಡುತ್ತೇವೆ. ತಾಯಿಯಂತೆ ನೋಡುತ್ತೇವೆ. ಅದೇ ಪ್ರೀತಿ, ಗೌರವ ಕೊಡುತ್ತೇವೆ. ಜೀವ ಕೊಟ್ಟಾದರೂ ಗೋವನ್ನು ಉಳಿಸಿಕೊಳ್ಳುತ್ತೇವೆ’ ಎಂದು ಘೋಷಿಸಿದರು. `ಗೋವಿನ ಮೇಲೆ ದೌರ್ಜನ್ಯವಾದಾಗ ಸುಮ್ಮನಿದ್ದರೆ ನಮ್ಮ ತಾಯಿಯ ಮೇಲೆ ದೌರ್ಜನ್ಯವಾದಾಗ ಸುಮ್ಮನಿದ್ದಂತೆ ಆಗುತ್ತದೆ. ಗೋವಿನ ಹತ್ಯೆ, ಕಳ್ಳತನ ಎಂದಿಗೂ ಸಹಿಸಲು ಸಾಧ್ಯವಿಲ್ಲ. ಗೋ ಹತ್ಯೆ ಮಾಡುತ್ತಿರುವವರನ್ನು ಕೂಡಲೇ ಹುಡುಕಿ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.