ಮಾಂಸ ಮಾರಾಟ ಮಾಡಿ ಕಾಸು ಸಂಪಾದಿಸುವ ಆಸೆಗಾಗಿ ಜಾನುವಾರು ಹತ್ಯೆ ನಡೆಸಿದ ಮೂವರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಹಸುವಿನ ದೇಹ ತುಂಡರಿಸುತ್ತಿರುವಾಗಲೇ ಪೊಲೀಸರು ದಾಳಿ ನಡೆಸಿದರಾದರೂ ಆ ಹಸುವನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಬುಧವಾರ ಭಟ್ಕಳ ಮುಗ್ದುಂ ಕಾಲೋನಿ ನ್ಯಾಶನಲ್ ಸ್ಟಿಟ್‌ನಲ್ಲಿ ನಿಜಾಮುದ್ದೀನ್ ಮುಕ್ತೇಸರ್ ಎಂಬಾತರು ಗೋ ವಧೆ ಮಾಡಿದ್ದಾರೆ. ಅದಾದ ನಂತರ ಮಹಮದ್ ಇಲಿಯಾಸ ಹಾಗೂ ಖಾಜಾ ಅಬುಲಾಸನ್ ಟೋನ್ಸೆ ಎಂಬಾತರನ್ನು ಕರೆಯಿಸಿ ಹಸುವನ್ನು ತುಂಡು ತುಂಡಾಗಿ ಕತ್ತರಿಸಿದ್ದಾರೆ.
ಈ ವಿಷಯದ ಬಗ್ಗೆ ಖಚಿತ ಮಾಹಿತಿ ಆಧರಿಸಿ ನಿಜಾಮುದ್ದೀನ್ ಮುಕ್ತೇಸರ್ ಮನೆ ಮೇಲೆ ಪೊಲೀಸ್ ಉಪನಿರೀಕ್ಷಕ ಸೋಮರಾಜ ರಾಠೋಡ ದಾಳಿ ಮಾಡಿದರು. ಆಗ ಅಲ್ಲಿ ತುಂಡು ಮಾಡಿದ್ದ ಹಸುವಿನ ರುಂಡ-ಕಾಲುಗಳು ಕಾಣಿಸಿದವು. ಅದರ ಪಕ್ಕದಲ್ಲಿಯೇ ಅಂದಾಜು 100 ಕೆಜಿ ಮಾಂಸವಿದ್ದು, ಅದರ ಸಾಗಾಟ ಪ್ರಕ್ರಿಯೆ ನಡೆದಿತ್ತು.
ತಕ್ಷಣ ಅಲ್ಲಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದರು. ಮಾಂಸ ಮಾರಾಟ ಉದ್ದೇಶದಿಂದ ಜಾನುವಾರು ತುಂಡರಿಸಿದನ್ನು ಖಚಿತಪಡಿಸಿಕೊಂಡು ಮಾಂಸ ತುಂಡರಿಸಲು ಬಳಸಿದ ಸಲಕರಣೆಗಳನ್ನು ವಶಕ್ಕೆ ಪಡೆದರು. ಆ ಮಾಂಸ ಮಾರಿ ದುಷ್ಕರ್ಮಿಗಳು 50 ಸಾವಿರ ರೂ ಹಣ ಸಂಪಾದಿಸಲು ಉದ್ದೇಶಿಸಿದ್ದು, ಅದಕ್ಕೆ ಪೊಲೀಸರು ತಡೆ ಒಡ್ಡಿದರು.
ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ತಿಮ್ಮಪ್ಪ ಎಸ್ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.



