ಗೋ ಕಳ್ಳತನ ಹಾಗೂ ಗೋವಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಪೊಲೀಸರು ಈ ವಾರದಲ್ಲಿ ಆರು ಜನರನ್ನು ಬಂಧಿಸಿದ್ದು, ಇದೀಗ ಮತ್ತೊಬ್ಬ ಕಿರಾತಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಹೊನ್ನಾವರದ ಸಾಲ್ಕೋಡು, ಕೊಂಡಾಕುಳಿ ಮೊದಲಾದ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಗೋ ಕಳ್ಳತನ ನಡೆಯುತ್ತಿದೆ. ಮೇವಿಗೆ ತೆರಳಿದ್ದ ಗೋವುಗಳನ್ನು ಸಹ ದುಷ್ಕರ್ಮಿಗಳು ಬಲಿ ಪಡೆಯುತ್ತಿದ್ದಾರೆ. ಇದಕ್ಕೆ ಸಂಬAಧಿಸಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಸ್ಥಳ ಪರಿಶೀಲನೆ ನಡೆಸಿ ಸಾಕ್ಷಿ-ಆಧಾರ ಹುಡುಕುತ್ತಿದ್ದಾರೆ.
ಮೊನ್ನೆ ಗೋ ವಧೆ ನಡೆಸುತ್ತಿದ್ದ ಹೊನ್ನಾವರದ ಹೆರಂಗಡಿ ಅಪ್ಕಾರ ಕಾಲೋನಿಯ ಚಾಲಕ ಅಲ್ತಾಪ್ ಅಹಮ್ಮದ್ ಕಾಟಾಪುರುಸು (28), ಅದೇ ಊರಿನ ಮತೀನ್ ಅಹಮ್ಮದ್ ಕಾಟಾಪುರುಸು (37) ಹಾಗೂ ಹೊನ್ನಾವರ ಕುರ್ವಾದಲ್ಲಿ ಅಡುಗೆ ಕೆಲಸ ಮಾಡುವ ಮಹಮ್ಮದ್ ಹುಸೇನ್ ಅಬ್ಬಾಸ ಕುರ್ವೇ ಎಂಬಾತರ ಹೆಡೆಮುರಿ ಕಟ್ಟಿದ್ದರು. ಅದಕ್ಕೂ ಮುನ್ನ ಪೊಲೀಸರು ಭಟ್ಕಳದ ಮುದ್ಗಂ ಕಾಲೋನಿಯಲ್ಲಿಯೂ ದಾಳಿ ನಡೆಸಿ ಹಸುವನ್ನು ತುಂಡು ತುಂಡಾಗಿ ಕತ್ತರಿಸಿದ್ದ ನಿಜಾಮುದ್ದೀನ್ ಮುಕ್ತೇಸರ್, ಮಹಮದ್ ಇಲಿಯಾಸ ಹಾಗೂ ಖಾಜಾ ಅಬುಲಾಸನ್ ಟೋನ್ಸೆ ಎಂಬಾತರ ವಿರುದ್ಧ ಕ್ರಮ ಜರುಗಿಸಿದ್ದರು.
ಇದೀಗ ಹೊನ್ನಾವರದ ಸಾಲ್ಕೋಡ ಬಳಿಯ ಕೊಂಡಾಕುಳಿ ಕೃಷ್ಣ ಆಚಾರಿ ಗರ್ಭಿಣಿ ಹಸುವಿನ ರುಂಡ ತುಂಡರಿಸಿ ಹೊಟ್ಟೆಯೊಳಗಿದ್ದ ಕರುವನ್ನು ತೆಗೆದು ಬಿಸಾಡಿದ್ದ ಪ್ರಕರಣದಲ್ಲಿ ಭಾಗಿಯಾದ ಹೊನ್ನಾವರ ವಲ್ಕಿಯ ಚಾಲಕ ತೌಫಿಕ್ ಅಹ್ಮದ್ ಜಿದ್ದಾ (41) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ ಜಗದೀಶ, ಪೊಲೀಸ್ ಉಪಾಧ್ಯಕ್ಷ ಮಹೇಶ ಕೆ, ಹೊನ್ನಾವರ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಕೆ, ಭಟ್ಕಳ ಸಿಪಿಐ ಸಂತೋಷ ಕಾಯ್ಕಿಣಿ, ಕುಮಟಾ ಪಿಐ ಯೋಗೇಶ ಕೆ ಎಂ ಜೊತೆಗೆ ಹೊನ್ನಾವರ ಪಿಐ ಮಂಜುನಾಥ, ರಾಜಶೇಖರ, ಸಂಗೀತಾ ಹಾಗೂ ಮಮತಾ ಈ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ.
ಪಿಎಸ್‌ಐ ಭರತ, ರವಿ ಗುಡ್ಡಿ, ಮಯೂರ, ಶ್ರೀಕಾಂತ ರಾತೋಡ್ ಹಾಗೂ ಖಾದರ್ ಭಾಷಾ ಸಹ ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಆರೋಪಿ ಪತ್ತೆಗೆ ಪೊಲೀಸ್ ಇಲಾಖೆ ಮೂರು ತಂಡ ರಚಿಸಿದ್ದು, ಈ ಎಲ್ಲಾ ಪೊಲೀಸ್ ಅಧಿಕಾರಿಗಳು ಗೋ ಕಳ್ಳತನ ಹಾಗೂ ಗೋ ವಧೆ ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನು ಬಂಧಿಸುವ ವಿಶ್ವಾಸದಲ್ಲಿದ್ದಾರೆ.