ಸರ್ಕಾರಿ ರಜಾ ದಿನವೂ ಕೆಲಸಕ್ಕೆ ಹಾಜರಾಗಿ ಗಣರಾಜ್ಯೋತ್ಸವ ಸಿದ್ಧತೆ ನಡೆಸುತ್ತಿದ್ದ ಹೊರಗುತ್ತಿಗೆ ನೌಕರರಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಐಸ್ ಕ್ರೀಂ ವಿತರಿಸಿ ಅವರ ದಾಹ ನೀಗಿಸಿದ್ದಾರೆ. `ಸರ್ಕಾರಿ ರಜಾ ದಿನಗಳಲ್ಲಿಯೂ ದುಡಿಯುವ ಶ್ರಮಿಕ ವರ್ಗದವರ ನೌಕರಿ ಖಾಯಂ ಮಾಡಬೇಕು’ ಎಂದು ಈ ವೇಳೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಆಗ್ರಹಿಸಿದರು.
4ನೇ ಶನಿವಾರದ ಹಿನ್ನಲೆ ಸರ್ಕಾರಿ ಕಚೇರಿಗಳಿಗೆ ರಜೆಯಿದ್ದರೂ ಕುಮಟಾದ ತಹಶೀಲ್ದಾರ್ ಕಚೇರಿಗೆ ಹೊರಗುತ್ತಿಗೆ ನೌಕರ ರಿಯಾಜ್ ಆಗಮಿಸಿದ್ದರು. ಅಧಿಕಾರಿಯೊಬ್ಬರು ಅವರಿಂದ ಕೆಲಸ ಪಡೆಯುತ್ತಿದ್ದರು.
ಬಿಸಿಲಿನಲ್ಲಿ ಧ್ವಜದ ಕಟ್ಟೆ ಸ್ವಚ್ಛಗೊಳಿಸುವಿಕೆ ಸೇರಿ ವಿವಿಧ ಕೆಲಸ ಮಾಡಿದ್ದರಿಂದ ರಿಯಾಜ್ ಸುಸ್ತಾಗಿದ್ದರು. ಇದನ್ನು ಗಮನಿಸಿದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರಿಗೆ ಐಸ್ ಕ್ರೀಂ ನೀಡಿ ಉಪಚರಿಸಿದರು.