`ಅರಣ್ಯ ಹಕ್ಕು ಕಾನೂನು ಅರಣ್ಯ ಅತಿಕ್ರಮಣದಾರರ ಪರವಾಗಿದ್ದರೂ ಇಚ್ಚಾಶಕ್ತಿ ಕೊರತೆಯಿಂದ ಅತಿಕ್ರಮಣದಾರರಿಗೆ ಸಮಸ್ಯೆಯಾಗುತ್ತಿದೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಕಾರವಾರದ ಮಲ್ಲಾಪುರದಲ್ಲಿ ಅತಿಕ್ರಮಣದಾರರ ಸಭೆಯಲ್ಲಿ ಮಾತನಾಡಿದ ಅವರು `ಹಕ್ಕಿಗಾಗಿ ಹೋರಾಟ ಮಾಡುವದು ಸಂವಿಧಾನಬದ್ಧ ಹಕ್ಕು. ಈ ವೇಳೆ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಪೂರ್ಣಪ್ರಮಾಣದ ಇಚ್ಚಾಶಕ್ತಿ ಪ್ರದರ್ಶಿಸುವುದು ಅಗತ್ಯ’ ಎಂದರು.
`ಅರಣ್ಯ ಭೂಮಿ ಹಕ್ಕಿಗೆ ನಿರಂತರ 33 ವರ್ಷದ ಹೋರಾಟ ಇತಿಹಾಸವಿದೆ. ಅನಸ್ಥರಸ್ಥ ಗುಡ್ಡಗಾಡು ಅರಣ್ಯ ಮತ್ತು ಗ್ರಾಮೀಣ ಭಾಗದ ಅರಣ್ಯವಾಸಿಗಳಲ್ಲಿ ಸಾಮಾಜಿಕ ಮತ್ತು ಕಾನೂನಾತ್ಮಕ ಜ್ಞಾನ ಅರಣ್ಯವಾಸಿಗಳಿಗೆ ನೀಡುವದರಿಂದ ಹೋರಾಟ ಶಕ್ತಿಯುತವಾಗಿ ಬೆಳೆದಿದೆ’ ಎಂದವರು ಹೇಳಿದರು.
ಈ ಸಭೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಉದಯ ಬಾಂದೆಕರ್, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ತನುಜಾ, ಪ್ರಮುಖರಾದ ಪೆಂಚಲಯ್ಯ ಕೊಸಿನಾಪೊಗು, ಅಮೋಜ್ ಏದಾ, ರಾಜೇಶ ಗೌಡ, ನೀಲಮ್ಮ, ಶ್ರೀನಿವಾಸ ಕೊಸಿನಾಪೊಗು, ಮಾಬ್ಲೆಶ್ವರ ಕುಣಬಿ, ಶಿವಾನಂದ ಕುಣಬಿ, ವಿಘ್ನೇಶ್ವರ ಬೆಳ್ಳಾ ಕುಣಬಿ ಇದ್ದರು.