ಕಬ್ಬು ಕಡಿಯುವ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರೊಬ್ಬರು ಎದೆನೋವಿನಿಂದ ಸಾವನಪ್ಪಿದ್ದಾರೆ.
ಗದ್ದೆಯಲ್ಲಿ ಬೆಳೆದಿದ್ದ ಕಬ್ಬನ್ನು ಕಡಿದು ಕಾರ್ಖಾನೆಗೆ ಸಾಗಿಸುವುದಕ್ಕಾಗಿ ಬಿಹಾರದ ಸುಕಾರಿ ರಾಮದಾರಿ (23) ಹಾಗೂ ಅವರ ಅಣ್ಣ ಮಹೇಂದ್ರ ರಾಮಾದಾರಿ ಹಳಿಯಾಳಕ್ಕೆ ಬಂದಿದ್ದರು. ನಿತ್ಯ ಬೆಳಗ್ಗೆ 6 ಗಂಟೆಗೆ ಎದ್ದು ಅವರು ಕೆಲಸಕ್ಕೆ ಹೋಗುತ್ತಿದ್ದರು.
ಜನವರಿ 26ರಂದು ಸಹ ಬಾಣಸಗೇರಿ-ಹಳಿಯಾಳ ರಸ್ತೆಯಲ್ಲಿ ಸಾಗುವಾಗ ಸುಕಾರಿ ರಾಮದಾರಿ ಎದೆನೋವು ಬರುವುದಾಗಿ ಹೇಳಿದರು. ಅದಾದ ನಂತರ ಅಲ್ಲಿಯೇ ಮೂರ್ಚೆ ಹೋದರು. ತಕ್ಷಣ ಅವರ ಅಣ್ಣ ಮಹೇಂದ್ರ ರಾಮಾದಾರಿ ಸುಕಾರಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರು.
ಆದರೆ, ಆಸ್ಪತ್ರೆಗೆ ಸೇರಿಸುವ ಮೊದಲೇ ಸುಕಾರಿ ರಾಮಚಾರಿ ಕೊನೆ ಉಸಿರೆಳೆದರು. ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಸುಕಾರಿ ಅವರ ಶವವಿದ್ದು, ಪೊಲೀಸ್ ಪ್ರಕರಣ ದಾಖಲಿಸಿ ಅವರ ಅಣ್ಣ ಅದನ್ನು ಬಿಡಿಸಿಕೊಂಡರು.