ಯಲ್ಲಾಪುರದ ಸವಣಗೇರಿ ಶಾಲೆಯಲ್ಲಿ ಮಕ್ಕಳ ಅನುಕೂಲಕ್ಕೆ ನೂತನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಶಾಲಾ ಅಭಿವೃದ್ಧಿಗೆ ಹಲವು ದಾನಿಗಳು ಕೈ ಜೋಡಿಸಿದ್ದಾರೆ.
ಸವಣಗೇರಿ ಶಾಲೆಯಲ್ಲಿ 3ನೇ ತರಗತಿ ಓದುವ ರಕ್ಷಾ ಹೆಗಡೆ ಅವರ ಪಾಲಕರು ಶಾಲೆಗೆ 10001ರೂ ನೆರವು ನೀಡಿದ್ದಾರೆ. ರಕ್ಷಾ ಹೆಗಡೆ ಅವರ ತಂದೆ ಮಹಾಬಲೇಶ್ವರ ಹೆಗಡೆ ಹಾಗೂ ತಾಯಿ ಚೈತ್ರಾ ಹೆಗಡೆ ಶಾಲೆಗೆ ಆಗಮಿಸಿ ನೂತನ ಶಾಲಾ ಕಟ್ಟಡಕ್ಕೆ ಕೊಡುಗೆ ನೀಡಿದರು.
ಈ ವೇಳೆ ಶಾಲಾ ಕಟ್ಟಡ, ಅಲ್ಲಿನ ಪರಿಸರವನ್ನು ನೋಡಿ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು. ಆರ್ಥಿಕ ನೆರವು ನೀಡಿದ ಪಾಲಕರಿಗೆ ಶಾಲಾ ಮುಖ್ಯ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಕೃತಜ್ಞತೆ ಸಲ್ಲಿಸಿದರು.