ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಪರಶುರಾಮ ಧಾಮನೆಕರ ತಮ್ಮ ಬ್ಯಾಂಕ್ ಖಾತೆಯಲ್ಲಿ 1.50 ಲಕ್ಷ ರೂ ಹಣವಿಟ್ಟಿದ್ದರು. ಆ ಹಣ ಇದೀಗ ಕಂಡವರ ಪಾಲಾಗಿದೆ!
ಹಳಿಯಾಳದ ಮೊದಲಗೇರಾವಿನ ಪರಶುರಾಮ ಧಾಮನೆಕರ ಜನವರಿ 21ರಂದು ಹಳಿಯಾಳ ಪಟ್ಟಣದ ಅಜರಾ ಬ್ಯಾಂಕ್ ಎಟಿಎಂ ಪ್ರವೇಶಿಸಿದ್ದರು. ತಮ್ಮ ಎಸ್‌ಬಿಐ ಬ್ಯಾಂಕ್ ಕಾರ್ಡನಿಂದ ಅವರು ಹಣ ಪಡೆಯುತ್ತಿದ್ದರು. ಸಾಲಿನಲ್ಲಿ ನಿಂತಿದ್ದ ಅಪರಿಚಿತರು ಎಟಿಎಂ ಪಿನ್ ನಂ ನೋಡಿಕೊಂಡಿದ್ದರು. ಅದಾದ ನಂತರ ಸಹಾಯ ಮಾಡುವ ನೆಪದಲ್ಲಿ ಅವರ ಬಳಿಯಿದ್ದ ಎಟಿಎಂ ಕಾರ್ಡ ಬದಲಿಸಿದ್ದರು.
ಆ ಅಪರಿಚಿತರು ಅದೇ ಕಾರ್ಡ ಹೋಲುವ ಇನ್ನೊಂದು ಕಾರ್ಡನ್ನು ಪರಶುರಾಮ ಧಾಮನೆಕರ ಅವರ ಕೈಗೆ ನೀಡಿ ಯಾಮಾರಿಸಿದ್ದರು. ಈ ಬಗ್ಗೆ ಅವರಿಗೆ ಆ ವೇಳೆ ಅರಿವಿಗೆ ಬಂದಿರಲಿಲ್ಲ. ಅದಾದ ನಂತರ ವಂಚಕರು ಆ ಕಾರ್ಡನ್ನು ಬಳಸಿ ಧಾರವಾಡ, ಗದಗ, ಕಿತ್ತೂರಿನಲ್ಲಿ ಹಣ ಪಡೆದಿದ್ದಾರೆ. ಶಾಪಿಂಗ್ ಕಾಂಪ್ಲೆಕ್ಸಗೆ ತೆರಳಿ ಶಾಫಿಂಗ್ ಸಹ ಮಾಡಿದ್ದು, ಒಟ್ಟು 150198 ರೂ ಹಣವನ್ನು ಬಳಸಿಕೊಂಡಿದ್ದಾರೆ.
ಈ ಬಗ್ಗೆ ಅರಿತ ಪರಶುರಾಮ ಧಾಮನೆಕರ ಹಳಿಯಾಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.