ಸರಕು ಸಾಕಾಣಿಕಾ ವಾಹನದಲ್ಲಿ ಪ್ರಯಾಣಿಕರನ್ನು ಕರೆದೊಯ್ದು 10 ಜನರ ಸಾವಿಗೆ ಕಾರಣನಾದ ಲಾರಿ ಚಾಲಕ ಹಾಗೂ ಆ ಲಾರಿಯ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಕುಮಟಾ ಸಂತೆಗೆ ತೆರಳುತ್ತಿದ್ದ ಲಾರಿ ಜನವರಿ 22ರ ನಸುಕಿನಲ್ಲಿ ಯಲ್ಲಾಪುರದ ಅರಬೈಲ್ ಬಳಿ ಪಲ್ಟಿಯಾಗಿತ್ತು. ಪರಿಣಾಮ ಲಾರಿಯಲ್ಲಿದ್ದ 10 ಜನ ಸ್ಥಳದಲ್ಲಿಯೇ ಸಾವನಪ್ಪಿದ್ದರು. 19 ಜನ ಗಾಯಗೊಂಡಿದ್ದರು.
ಈ ಬಗ್ಗೆ ಅಡುಗೆ ಕೆಲಸ ಮಾಡುವ ನೂರ್ ಅಹ್ಮದ್ ಜಮಖಂಡಿ ಪೊಲೀಸ್ ದೂರು ನೀಡಿದ್ದು, ಆ ದೂರಿನ ಅನ್ವಯ ಲಾರಿ ಚಾಲಕ ನಿಜಾಮುದ್ಧೀನ್ ಸೌದಗಾರ ಹಾಗೂ ಲಾರಿ ಮಾಲಕ ಗೌಸ್ ಮಹಮೊದ್ದೀನ್ ಲೋಹಾರ್ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ.