ಯಲ್ಲಾಪುರ-ಶಿರಸಿ ರಸ್ತೆಯ ಶ್ರೀಮಾತಾ ಡ್ರೈವಿಂಗ್ ಸ್ಕೂಲ್ ಮಾಲಕ ಮಂಜುನಾಥ ಭಟ್ಟ ಅವರ ಕಾರಿಗೆ ಬೆಂಕಿ ತಗುಲಿದೆ. ಪರಿಣಾಮ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
ಮಂಜುನಾಥ ಭಟ್ಟ ಅವರು ಬುಧವಾರ ಶಿರಸಿಗೆ ಹೋಗಿದ್ದರು. ಅವರು ಆಸ್ಪತ್ರೆಗೆ ತೆರಳಿ ಹಿಂತಿರುಗುವಷ್ಟರಲ್ಲಿ ಕಾರು ಹೊತ್ತಿ ಉರಿದಿದೆ. ಆಸ್ಪತ್ರೆಯ ಒಳಗಿನಿಂದ ಕಾರು ಬೆಂಕಿಗೆ ಆಹುತಿಯಾಗಿರುವುದನ್ನು ಕಂಡರೂ ಅದನ್ನು ತಡೆಯಲು ಮಂಜುನಾಥ ಭಟ್ಟ ಅವರಿಗೆ ಸಾಧ್ಯವಾಗಲಿಲ್ಲ.
ಇನ್ನೂ ಕಾರಿನಿಂದ ಹೊಗೆ ಬರುತ್ತಿರುವುದನ್ನು ನೋಡಿದ ಸ್ಥಳೀಯರು ಅದನ್ನು ಆರಿಸುವ ಪ್ರಯತ್ನ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿ ಸಹ ಕಾರಿನ ಬೆಂಕಿ ಆರಿಸಲು ಹರಸಾಹಸ ನಡೆಸಿದರು. ಸುತ್ತಲಿನ ಜನ ಕೊಡ-ಬಕೇಟುಗಳಲ್ಲಿ ನೀರು ತಂದು ಕಾರಿನ ಮೇಲೆ ಸುರಿದರು. ಆದರೆ, ಬೆಂಕಿಯ ಜ್ವಾಲೆ ಕಡಿಮೆಯಾಗಲಿಲ್ಲ.
ಈ ವಿಷಯ ಅರಿತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದರು. ಅಷ್ಟರೊಳಗೆ ಕಾರಿನ ಬೆಂಕಿ ವ್ಯಾಪಕ ಪ್ರಮಾಣದಲ್ಲಿ ಹಬ್ಬಿಕೊಂಡಿತ್ತು. ಟ್ಯಾಂಕರ್ ನೀರಿನ ಮೂಲಕ ಬೆಂಕಿ ಆರಿಸುವ ಪ್ರಯತ್ನ ನಡೆದರೂ ಪ್ರಯೋಜನವಾಗಲಿಲ್ಲ. ಅಗ್ನಿ ಅವಘಡಕ್ಕೆ ಕಾರಣವೂ ಗೊತ್ತಾಗಲಿಲ್ಲ. ಅವಘಡದಿಂದ ಯಾವುದೇ ಪ್ರಾಣಾಪಾಯ ನಡೆದಿಲ್ಲ.
ಅಗ್ನಿ ಅವಘಡದ ವಿಡಿಯೋ ಹಾಗೂ ಶ್ರೀಮಾತಾ ಮಂಜುನಾಥ ಭಟ್ಟರು ಹೇಳಿದ್ದೇನು? ಇಲ್ಲಿ ನೋಡಿ..