ಸಂಘಟನೆ, ಮಾತುಗಾರಿಕೆ ಹಾಗೂ ವಿಭಿನ್ನ ಚಟುವಟಿಕೆಗಳಿಂದ ಬಿಜೆಪಿ ಪಕ್ಷ ಮುನ್ನಡೆಸುತ್ತಿರುವ ಎನ್ ಎಸ್ ಹೆಗಡೆ ಕರ್ಕಿ ಅವರು ಉತ್ತರ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.
ಬಿಜೆಪಿ ಚುನಾವಣಾಧಿಕಾರಿ ಸಿದ್ದರಾಮಣ್ಣ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಮುಂದಿನ ಮೂರು ವರ್ಷದ ಅವಧಿಗೆ ಎನ್ ಎಸ್ ಹೆಗಡೆ ಕರ್ಕಿ ಅವರು ಬಿಜೆಪಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಅವರ ಮುಂದಾಳತ್ವದಲ್ಲಿಯೇ ಮುಂದಿನ ಚುನಾವಣೆ ನಡೆಸಲು ಬಿಜೆಪಿ ನಿರ್ಣಯಿಸಿದೆ.
ಈ ಹಿನ್ನಲೆ ಎನ್ ಎಸ್ ಹೆಗಡೆ ಕರ್ಕಿ ಅವರಿಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಬಿಜೆಪಿಯನ್ನು ಇನ್ನಷ್ಟು ಶಕ್ತಿಯುತಗೊಳಿಸುವಂತೆ ಪಕ್ಷ ಆದೇಶಿಸಿದೆ.