ಉತ್ತರ ಕನ್ನಡ ಜಿಲ್ಲೆಯ 18 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾಕೂಟ ಆಯೋಜಿಸಿದೆ. ಸದ್ಯ ಕರ್ನಾಟಕದಲ್ಲಿ ಮಹಿಳಾ ಪ್ರಯಾಣಿಕರಿಗೆ ಬಸ್ ಓಡಾಟ ಉಚಿತವಾಗಿದ್ದರೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಭಾಗವಹಿಸುವ ಸ್ಪರ್ಧಿಗಳಿಗೆ ಪ್ರಯಾಣ ಭತ್ಯೆ ನೀಡುವುದಾಗಿ ಘೋಷಿಸಿದೆ.
ಮಹಿಳಾ ದಿನಾಚರಣೆಯ ಅಂಗವಾಗಿ ಈ ಕ್ರೀಡಾಕೂಟ ನಡೆಯಲಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ 100 ಮೀ ಮತ್ತು 200 ಮೀ ಓಟ, ಶಾಟ್‌ಪುಟ್, ಡಿಸ್ಕಸ್ ಹಾಗೂ ಜಾವೆಲಿನ್ ಥ್ರೋ ಆಟಗಳಿರಲಿವೆ. ಗುಂಪು ಆಟಗಳಲ್ಲಿ ವಾಲಿಬಾಲ್, ಥ್ರೋಬಾಲ್, ಹಗ್ಗ-ಜಗ್ಗಾಟ ಮತ್ತು ಕಬ್ಬಡ್ಡಿ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಈ ಮಹಿಳಾ ಕ್ರೀಡಾಕೂಟವನ್ನು ಜ 31ರಂದು ಶಿರಸಿ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೂ ಪ್ರಯಾಣ ಭತ್ಯೆಯನ್ನು ಇಲಾಖೆ ಪಾವತಿಸಲಿದೆ. ಗೆದ್ದವರಿಗೆ ಆಕರ್ಷಕ ಬಹುಮಾನಗಳು ಇವೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಿಳಿಸಿದೆ.
ಇಲಾಖೆ ಅಧಿಕಾರಿಗಳ ಸ್ಪಷ್ಠನೆ:
`ಗ್ರಾಮೀಣ ಭಾಗಗಳಿಂದಲೂ ಅನೇಕ ಸ್ಪರ್ಧಾಳುಗಳು ಕ್ರೀಡೆಯಲ್ಲಿ ಭಾಗವಹಿಸಲಿದ್ದು, ಅವರು ಖಾಸಗಿ ವಾಹನಗಳ ಮೂಲಕ ಆಗಮಿಸಿದರೂ ಪ್ರಯಾಣ ಭತ್ಯೆ ನೀಡಲಾಗುತ್ತದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯ್ಕ ಸ್ಪಷ್ಠಪಡಿಸಿದ್ದಾರೆ. `ಗುಂಪು ಆಟಗಳಲ್ಲಿ ಭಾಗವಹಿಸುವವರಿಗೆ ಪ್ರತ್ಯೇಕ ಬಸ್ಸುಗಳನ್ನು ಬರಲು ಕಷ್ಟ. ಹೀಗಾಗಿ ಅವರೆಲ್ಲರೂ ಒಟ್ಟಾಗಿ ಖಾಸಗಿ ವಾಹನಗಳ ಮೂಲಕವೂ ಬರಬಹುದಾಗಿದ್ದು, ಬೇರೆ ಬೇರೆ ಊರಿನಿಂದ ಬರುವ ಕ್ರೀಡಾಪಟುಗಳ ಆಧಾರ್ ಕಾರ್ಡ ಗಮನಿಸಿ ಪ್ರಯಾಣ ಭತ್ಯೆ ಒದಗಿಸಲಾಗುತ್ತದೆ’ ಎಂದವರು ಮಾಹಿತಿ ನೀಡಿದ್ದಾರೆ. `ಕ್ರೀಡೆಯಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಳಕ್ಕಾಗಿ ಪ್ರಯಾಣ ಭತ್ಯೆಗೆ ಒತ್ತು ನೀಡಲಾಗಿದೆ. ಇದರಿಂದ ಹಳ್ಳಿ ಪ್ರದೇಶದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿದೆ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.