ಕೃಷಿ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರೊಬ್ಬರು ಅಡಿಕೆ ತೋಟದಲ್ಲಿ ಅಸ್ವಸ್ಥರಾಗಿದ್ದು, ಆಸ್ಪತ್ರೆ ಸೇರುವ ಮುನ್ನ ಸಾವನಪ್ಪಿದ್ದಾರೆ.
ಯಲ್ಲಾಪುರ ತಾಲೂಕಿನ ಜಮಗುಳಿಯ ಗೋಪಾಲ ಮರಾಠಿ (46) ಅವರು ತಟಗಾರ ಗ್ರಾಮದ ನರಸಿಂಹ ಭಟ್ಟ ಬೋಳಪಾಲ ಅವರ ತೋಟಕ್ಕೆ ಗೊಬ್ಬರ ಹಾಕುವ ಕೆಲಸಕ್ಕೆ ಬಂದಿದ್ದರು. ಜನವರಿ 28ರಂದು ಅವರು ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ವಾಂತಿ ಮಾಡಿಕೊಂಡರು. ನಂತರ ಅವರು ಅಲ್ಲಿ ಕುಸಿದು ಬಿದ್ದಿದ್ದು, ತೀವೃ ಅಸ್ವಸ್ಥರಾದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು.
ಆದರೆ, ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಕೊನೆ ಉಸಿರೆಳೆದರು. ಆಸ್ಪತ್ರೆಯಲ್ಲಿನ ವೈದ್ಯರು ಸಹ ಗೋಪಾಲ ಮರಾಠಿ ಅವರು ಸಾವನಪ್ಪಿರುವ ಬಗ್ಗೆ ಘೋಷಿಸಿದರು. ಅವರ ಪತ್ನಿ ಪಾರ್ವತಿ ಮರಾಠಿ ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.



