ರೈತರು ಬೆಳೆದ ಕಬ್ಬಿನ ನಡುವೆ ಅಡಿಗಿಸಿಟ್ಟಿದ್ದ ಸಾಗವಾನಿ ತುಂಡುಗಳನ್ನು ಹಳಿಯಾಳ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೆಸರೋಳ್ಳಿ ಗ್ರಾಮದ ಸ ನಂ 75/5ರಲ್ಲಿ ಕಬ್ಬು ಬೆಳೆಯಾಗಿದ್ದು, ಅದರ ನಡುವೆ ಸಾಗವಾನಿ ಮರ ನಾಟಾಗಳಿದ್ದವು. ಮರ ಕಡಿದ ದುಷ್ಕರ್ಮಿಗಳು ಅದನ್ನು ಕಬ್ಬಿನ ಗದ್ದೆಯ ವಿವಿಧ ಕಡೆ ಅಡಗಿಸಿಟ್ಟಿದ್ದರು.
ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ಅಲ್ಲಿ ದಾಳಿ ನಡೆಸಿದರು. ಆ ವೇಳೆ 50 ಸಾವಿರ ರೂ ಮೌಲ್ಯದ 12 ನಾಟಾಗಳು ಪತ್ತೆಯಾಗಿದೆ. ನಾಟಾವನ್ನು ಅಡಗಿಸಿಟ್ಟಿದ್ದ ಆರೋಪಿತರಿಗಾಗಿ ಶೋಧ ಮುಂದುವರೆದಿದೆ.