ಸರ್ಕಾರಿ ಸಮಯದ ಅವಧಿಯಲ್ಲಿ ಸಾಮಾಜಿಕ ಅರಣ್ಯ ವಿಭಾಗ ಕಚೇರಿ ಬಾಗಿಲು ಹಾಕಿಕೊಂಡಿದ್ದು, ಬೆಳಗ್ಗೆ 11 ಗಂಟೆ ಅವಧಿಯಲ್ಲಿ ಟಪಾಲು ಸಲ್ಲಿಕೆಗೆ ಬಂದವರು ನಿರಾಶೆಯಿಂದ ಮರಳಿದ್ದಾರೆ. ಸಂಜೆ 4 ಗಂಟೆಗೆ ತೆರಳಿದಾಗಲೂ ಕಚೇರಿ ಬಾಗಿಲು ಹಾಕಿಕೊಂಡಿದ್ದರಿAದ ಬೇಸರ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರದ ಸಾಮಾಜಿಕ ಅರಣ್ಯ ವಿಭಾಗ ಕಚೇರಿ ಶನಿವಾರ ತೆರೆದಿರಲಿಲ್ಲ. ಇದರಿಂದ ಅಂಬೇಡ್ಕರ ಪರ್ವ ದಲಿತ ಸಂಘರ್ಷ ಸಮಿತಿಯ ವಿನಾಯಕ ಬೋವಿವಡ್ಡರ್ ಅವರು ಪರಿತಪಿಸಿದರು. `ಸರ್ಕಾರಿ ಕಾಮಗಾರಿ ಸರಿಯಾಗಿ ನಡೆಯದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುವುದಕ್ಕಾಗಿ ತೆರಳಿದಾಗ ಕಚೇರಿ ಬಾಗಿಲು ಹಾಕಿಕೊಂಡಿದ್ದು, ಫೋನ್ ಮಾಡಿದರೂ ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ’ ಎಂದವರು ಬೇಸರಿಸಿಕೊಂಡರು.
`ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗೆ ಅನ್ಯ ಕೆಲಸಕ್ಕೆ ನೇಮಿಸುತ್ತಿದ್ದಾರೆ. ಈ ದಿನ ನರ್ಸರಿಯಲ್ಲಿರುವ ಬಾಗಿಲು ತೆರೆದಿಲ್ಲ ಎಂಬ ಮಾಹಿತಿ ಸಿಕ್ಕಿದ್ದು, ಸರ್ಕಾರಿ ಸಮಯದಲ್ಲಿ ಕಚೇರಿ ಬಾಗಿಲು ಹಾಕಿರುವುದು ಸರಿಯಲ್ಲ’ ಎಂದವರು ಅಭಿಪ್ರಾಯವ್ಯಕ್ತಪಡಿಸಿದರು.





