`ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಜನಪರ’ ಎಂದು ಯಲ್ಲಾಪುರದ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ.
`12 ಲಕ್ಷ ರೂಪಾಯಿವರೆಗಿನ ಆದಾಯ ತೆರಿಗೆ ವಿನಾಯತಿ, ರೈತ ವರ್ಗಕ್ಕೆ 5 ಲಕ್ಷವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ ಸಾಲ ಉತ್ತಮ ಘೋಷಣೆಯಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಕಾನ್ಸರ್ ಕೇರ್ ವಿಭಾಗ ಶುರು ಮಾಡುವುದು ಜನರಿಗೆ ಅನುಕೂಲವಾಗಲಿದೆ. ಕ್ಯಾನ್ಸರ್ ಸೇರಿ ವಿವಿಧ ರೀತಿಯ 36 ಗಂಭೀರ ಕಾಯಿಲೆಗಳ ನಿವಾರಣೆಗೆ ಬಳಸುವ ಔಷಧಿಗಳ ಮೇಲಿನ ಸುಂಕ ರದ್ಧತಿ ಸಹ ಸ್ವಾಗತಾರ್ಹ’ ಎಂದವರು ಹೇಳಿದ್ದಾರೆ.
`ಬೀದಿ ಬದಿ ವ್ಯಾಪಾರಿಗಳಿಗೂ ಕ್ರೆಡಿಟ್ ಕಾರ್ಡ ವಿತರಣೆ, ಸರಕಾರಿ ಪ್ರೌಢಶಾಲೆಗಳಲ್ಲಿ ಇಂಟರ್‌ನೆಟ್ ವ್ಯವಸ್ಥೆ, ಅಂಚೆ ಕಚೇರಿಗಳ ಆರಂಭದ ಘೋಷಣೆಗಳು ಜನೋಪಯೋಗಿಯಾಗಿದೆ. ದೇಶಿಯ ತಂತ್ರಜ್ಞಾನಕ್ಕೆ ಒತ್ತು ನೀಡಿರುವುದು ಹಾಗೂ ಪ್ರವಾಸೋಧ್ಯಮ ತಾಣಗಳ ಅಭಿವೃದ್ಧಿಗೂ ಸರ್ಕಾರ ಕೊಡುಗೆ ನೀಡಿದೆ’ ಎಂದವರು ಹೇಳಿದ್ದಾರೆ.