ಮೈಕ್ರೋ ಫೈನಾನ್ಸಿನವರಿಂದ ಸಾಲ ಪಡೆದಿದಲ್ಲದೇ ಉಳಿದವರಿಗೂ ಸಾಲ ಕೊಡಿಸಿ ಆ ಹಣವನ್ನು ಸ್ವಂತ ಬಳಕೆ ಮಾಡಿಕೊಂಡ ಮಹಿಳೆಯರು ಆ ಸಾಲ ಮರುಪಾವತಿ ಮಾಡಲಾಗದೇ ಆತ್ಮಹತ್ಯೆಯ ಬೆದರಿಕೆವೊಡ್ಡಿದ್ದು, ಇದನ್ನು ಅರಿತ ಪೊಲೀಸರು ಮಹಿಳೆಯರು ಹಾಗೂ ಮೈಕ್ರೋ ಫೈನಾನ್ಸಿನವರನ್ನು ಕರೆಯಿಸಿ ಬುದ್ದಿ ಹೇಳಿದ್ದಾರೆ.
ದಾಂಡೇಲಿಯ ಆಸ್ಮಾ (ಹೆಸರು ಬದಲಿಸಿದೆ) ಎಂಬಾತರು ಮಹಿಳೆಯೊಬ್ಬರು ಮೈಕ್ರೋ ಫೈನಾನ್ಸ್ ಕಂಪನಿಯಿoದ ಸಾಲ ಪಡೆದಿದ್ದರು. ಜೊತೆಗೆ ಮತ್ತೆ ನಾಲ್ವರಿಗೆ ಸಾಲ ಕೊಡಿಸಿದ್ದರು. ನಂತರ ಆ ನಾಲ್ವರು ಸಾಲದ ಹಣವನ್ನು ಸ್ವಂತ ಬಳಕೆಗೆ ಉಪಯೋಗಿಸಿಕೊಂಡಿದ್ದರು. ಆದರೆ, ಸಾಲ ಮರು ಪಾವತಿಗೆ ಸಾಧ್ಯವಾಗಿರಲಿಲ್ಲ.
ಮೈಕ್ರೋ ಫೈನಾನ್ಸ್ ಕಂಪನಿಯವರು ಸಾಲ ಪಡೆದಿದ್ದ ಮಹಿಳೆಯರಿಗೆ ಸಾಲ ಮರುಪಾವತಿಗೆ ಒತ್ತಾಯಿಸಿದ್ದರು. ಮೈಕ್ರೋ ಫೈನಾನ್ಸ್ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಹಿನಿಯೊಂದರ ಮೂಲಕ ಮಹಿಳೆಯರು ಹೇಳಿಕೆ ಬಿಡುಗಡೆ ಮಾಡಿದ್ದರು. ವಿಷಯದ ಗಂಭೀರತೆ ಅರಿತ ಪೊಲೀಸರು ಮಹಿಳೆಯರನ್ನು ಠಾಣೆಗೆ ಕರೆಯಿಸಿದರು. `ಸಾಲಮನ್ನಾ ಆಗುವ ಉದ್ದೇಶದಿಂದ ಈ ರೀತಿ ಹೇಳಿಕೆ ನೀಡಿದ್ದೇವೆ’ ಎಂದು ಅವರು ಸತ್ಯ ಒಪ್ಪಿಕೊಂಡರು.
ಅದಾದ ನಂತರ ಮೈಕ್ರೋ ಫೈನಾನ್ಸ ಕಂಪನಿಯವರನ್ನು ಕರೆಯಿಸಿ ಅವರಿಗೂ ಪೊಲೀಸರು ಬುದ್ದಿ ಹೇಳಿದರು. ದಬ್ಬಾಳಿಕೆಯಿಂದ ಸಾಲ ವಸೂಲಿ ಮಾಡದಂತೆ ಹಾಗೂ ಕಿರುಕುಳ ನೀಡದಂತೆ ಸೂಚಿಸಿದರು.