ಅಬಕಾರಿ ಉಪನಿರೀಕ್ಷಕ ಪುರುಷೋತ್ತಮ ಹಳದನಕರ್ ಅವರು ತಮ್ಮ 58ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ.
ಕಾರವಾರದ ದೇವಳಿವಾಡ ಪದ್ಮನಾಭನಗರದಲ್ಲಿ ಅವರು ವಾಸವಾಗಿದ್ದರು. ಹೃದಯ ರೋಗದಿಂದ ಅವರು ಬಳಲುತ್ತಿದ್ದು, ಇದಕ್ಕೆ ಚಿಕಿತ್ಸೆಯನ್ನು ಪಡೆದಿದ್ದರು. ಅದಾಗಿಯೂ ಅವರು ಆಗಾಗ ಅಸ್ವಸ್ಥರಾಗುತ್ತಿದ್ದರು.
ಫೆಬ್ರವರಿ 4ರಂದು ಪುರುಷೋತ್ತಮ ಹಳದನಕರ್ ಅವರು ಮನೆಯಲ್ಲಿದ್ದಾಗ ಎದೆ ನೋವಿನಿಂದ ಕುಸಿದು ಬಿದ್ದರು. ಕೊನೆಗೆ ಅಲ್ಲಿಯೇ ಅವರು ಕೊನೆ ಉಸಿರೆಳೆದರು.
ಸದ್ಯ ಅವರ ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಕುಟುಂಬದವರು ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆಯುವ ಪ್ರಕ್ರಿಯೆ ನಡೆಸಿದ್ದಾರೆ.



