ಸಹಕಾರಿ ಸಂಘದಲ್ಲಿ 5 ಲಕ್ಷ ರೂ ಸಾಲಪಡೆದು ಅದನ್ನು ಪಾವತಿಸದ ಸಾಲಗಾರನಿಗೆ ನ್ಯಾಯಾಲಯ 9 ಲಕ್ಷ ರೂ ಹಣ ಮರುಪಾವತಿ ಮಾಡುವಂತೆ ಸೂಚಿಸಿದೆ. ಅದು ಸಾಧ್ಯವಾಗದೇ ಇದ್ದರೆ 6 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.
ಶಿರಸಿ ನಗರದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಭಾಸ್ಕರ ಮಡಗಾಂವಕರ ಅವರಯ 2017ರಲ್ಲಿ 5 ಲಕ್ಷ ರೂ ಸಾಲ ಪಡೆದಿದ್ದರು. ಆದರೆ, ಆ ಸಾಲವನ್ನು ಮರು ಪಾವತಿ ಮಾಡಿರಲಿಲ್ಲ. ಅವರು ಸಾಲ ಮರುಪಾವತಿಗೆ ನೀಡಿದ ಚೆಕ್ ಸಹ ಅಮಾನ್ಯವಾಗಿತ್ತು. ಹೀಗಾಗಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ನ್ಯಾಯಾಲಯದಲ್ಲಿ ಚೆಕ್ ಬೌನ್ಸ ದಾವೆ ಹೂಡಿದ್ದರು.
ಎರಡು ಕಡೆಯವರ ವಾದ ಆಲಿಸಿದ ನ್ಯಾಯಾಧೀಶ ಅಭಿಷೇಕ ರಾಮಚಂದ್ರ ಜೋಶಿ ಅವರು `ಸಾಲ ಮರಳಿಸದ ಭಾಸ್ಕರ ಮಡಗಾಂವಕರ ಅವರು ಸಂಘಕ್ಕೆ 9 ಲಕ್ಷ ರೂ ಹಣ ಪಾವತಿಸಬೇಕು’ ಎಂದು ಆದೇಶಿಸಿದರು. ಇಲ್ಲವಾದಲ್ಲಿ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು’ ಎಂದು ತೀರ್ಫು ಹೊರಡಿಸಿದರು. ಸಂಘದ ಪರವಾಗಿ ವಕೀಲ ಎಸ್ ಎನ್ ನಾಯ್ಕ ವಾದ ಮಂಡಿಸಿದರು.