ಕುಮಟಾ: ರಾಜ್ಯ ಸರ್ಕಾರ ಇಂಧನ ಬೆಲೆ ಏರಿಸಿರುವುದನ್ನು ವಿರೋಧಿಸಿ ಗಿಬ್ ಸರ್ಕಲ್’ನಲ್ಲಿ ಬಿಜೆಪಿಯವರು ಪ್ರತಿಭಟಿಸಿದರು. ಇದಕ್ಕೆ ವಿವಿಧ ಸಂಘಟನೆಯವರು ಕೈ ಜೋಡಿಸಿದರು.
ಮಂಡಳ ಅಧ್ಯಕ್ಷ ಜಿ ಐ ಹೆಗಡೆ ಮಾತನಾಡಿ `ಕಾಂಗ್ರೆಸ್ ಸರ್ಕಾರ ಜನರ ಜೀವನದ ಜೊತೆ ಆಟವಾಡುತ್ತಿದೆ. ಉಚಿತ ಹೆಸರಿನಲ್ಲಿ ಕಾಂಗ್ರೆಸಿಗರು ಲೂಟಿ ಹೊಡೆಯುತ್ತಿದ್ದಾರೆ. ಮಹಿಳೆಯರಿಗೆ ಹಣ, ನಿರುದ್ಯೋಗಿಗಳಿಗೆ ಭತ್ಯೆ, ಉಚಿತ ವಿದ್ಯುತ್ ವಿಷಯದಲ್ಲಿ ಸಹ ಜನರಿಗೆ ಅನ್ಯಾಯವಾಗಿದೆ’ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ `ಕೇಂದ್ರ ಸರ್ಕಾರ ಇಂದನ ಬೆಲೆ ಕಡಿಮೆ ಮಾಡಿದ್ದರೂ ರಾಜ್ಯ ಸರ್ಕಾರ ಮತ್ತೆ 3 ರೂ ಏರಿಸಿದೆ. ಇದರಿಂದ ಪ್ರತಿ ಸಾಮಗ್ರಿ ಬೆಲೆ ಏರಿಕೆಯಾಗಲಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಣೆ’ ಎಂದು ದೂರಿದರು.
ಪ್ರತಿಭಟನೆಯಲ್ಲಿ ಮಂಡಳ ಕಾಯ9ದಶಿ9 ಗಣೇಶ ಪಂಡಿತ, ವಿನಾಯಕ ನಾಯ್ಕ, ಜಿಲ್ಲಾ ಪ್ರಮುಖ ಅಶೋಕ ಪ್ರಭು, ವಿವಿಧ ಮೊಚಾ9ದ ಪದಾಧಿಕಾರಿಗಳಾದ ವಿಶ್ವನಾಥ ನಾಯ್ಕ, ಶ್ರೀಧರ ಗೌಡ, ಮೋಹಿನಿ ಗೌಡ, ದೀಪಾ ಹಿಣಿ, ಅನುರಾಧಾ ಭಟ್,ಪವನ ಶೆಟ್ಟಿ, ಮಂಜುಳಾ ಮುಕ್ರಿ, ವಿನಾಯಕ ಭಟ್, ಮಂಜುನಾಥ ಪಟಗಾರ. ಎಮ್ ಎಮ್ ಹೆಗಡೆ ಇತರರು ಇದ್ದರು.
Discussion about this post