ಶಿರಸಿ: `ಬಿಜೆಪಿಗರು ಕ್ಲುಲಕ ಕಾರಣದಿಂದ ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿದ್ದಾರೆ’ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಅಧ್ಯಕ್ಷ ಪ್ರಸನ್ನ ಶೆಟ್ಟಿ ಹೇಳಿದ್ದಾರೆ.
`ವಿಐಪಿ ಸಂಸ್ಕೃತಿಗೆ ಬೇಸತ್ತ ಜನ ವಿಧಾನಸಭೆಯಲ್ಲಿ ಭೀಮಣ್ಣ ನಾಯ್ಕ ಅವರನ್ನು ಬೆಂಬಲಿಸಿದ್ದು, ಅವರು ಇದೀಗ ಜಾತಿ ಧರ್ಮಗಳ ಬೇಧ ಮಾಡದೇ ಕೆಲಸ ಮಾಡುತ್ತಿದ್ದಾರೆ. ಜನರ ಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿದ ಭೀಮಣ್ಣ ನಾಯ್ಕ ಸ್ವತಃ ಮುಂದೆ ನಿಂತು ಅಭಿವೃದ್ಧಿ ಕೆಲಸ ಮಾಡಿಸುತ್ತಿದ್ದಾರೆ. ಭ್ರಷ್ಟಾಚಾರ, ಕಳಪೆ ಕಾಮಗಾರಿ ನಡೆಯಬಾರದು ಎಂಬ ಉದ್ದೇಶದಿಂದ ಕ್ಷೇತ್ರದ ಎಲ್ಲಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವರ ವಿರುದ್ಧ ಬಿಜೆಪಿಗರು ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಲಿ’ ಎಂದವರು ಹೇಳಿದ್ದಾರೆ. `ದಶಕಗಳ ಕಾಲ ಶಿರಸಿ ಆಳಿದ ನೂತನ ಸಂಸದರು ಬೇರೆಯವರನ್ನು ಟೀಸಿಸುವ ಬದಲು ಈಗಲಾದರೂ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ತರಲಿ’ ಎಂದು ಹೇಳಿದ್ದಾರೆ.
Discussion about this post