6 Skip to content

ಸೆಂಟ್ರಿoಗ್ ಕಾರ್ಮಿಕನಿಗೆ ವಿದ್ಯುತ್ ಶಾಕ್: ಸಾವು

ಕುಮಟಾ: ಸುವರ್ಣಗದ್ದೆಯ ಮಂಜುನಾಥ ವೈದ್ಯ ಅವರ ಮನೆ ನಿರ್ಮಾಣ ಕೆಲಸಕ್ಕೆ ಬಂದಿದ್ದ ಶ್ರೀಧರ ಪಟಗಾರ (48) ಎಂಬಾತ ವಿದ್ಯುತ್ ತಗುಲಿ ಸಾವನಪ್ಪಿದ್ದಾನೆ.

ಬಾಡ ಗೂಡೆಅಂಗಡಿಯ ಶ್ರೀಧರ ಪಟಗಾರ್ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದ. ಜೂ 19ರಂದು ಆತ ಮಂಜುನಾಥ ವೈದ್ಯ ಅವರ ಮನೆಗೆ ಕೆಲಸಕ್ಕೆ ಆಗಮಿಸಿದ್ದು, ಮನೆ ಮಹಡಿ ಮೇಲೆ ಹಾಕಿದ್ದ ಸೆಂಟ್ರಿoಗ್ ಸಾಮಗ್ರಿಗಳನ್ನು ಬಿಚ್ಚುತ್ತಿದ್ದ. ಮಧ್ಯಾಹ್ನ 12.30ರ ಅವಧಿಯಲ್ಲಿ ಮನೆಯ ಸರ್ವೀಸ್’ಗೆ ಎಳೆದಿದ್ದ ವಿದ್ಯುತ್ ತಂತಿ ಆತನ ಕೈಗೆ ತಗುಲಿದೆ. ತಕ್ಷಣ ಕೆಳಗೆ ಬಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ.

Leave a comment

Leave a Reply

You cannot copy content of this page