ದುಡಿಯುವುದಕ್ಕಾಗಿ ಶಿರಸಿಗೆ ಬಂದಿದ್ದ ಪ್ರಕಾಶ ಬಡಿಗೇರ್ ವಿಪರೀತ ಸರಾಯಿ ಸೇವನೆಯಿಂದ ಸಾವನಪ್ಪಿದ್ದಾರೆ.
ಹಾನಗಲ್ ತಾಲೂಕಿನ ಹಳೇ ಸಮ್ಮಸಗಿಯ ಪ್ರಕಾಶ ಬಡಿಗೇರ್ (45) ಕುಟುಂಬಸಹಿತವಾಗಿ ದುಡಿಯಲು ಶಿರಸಿಗೆ ಬಂದಿದ್ದರು. ಆದರೆ, ದುಡಿದ ಹಣವನ್ನೆಲ್ಲ ಅವರು ಮದ್ಯದ ಅಂಗಡಿಗೆ ನೀಡುತ್ತಿದ್ದರು. ಈ ನಡುವೆ ದುಡಿಯುವುದಕ್ಕೆ ಸಹ ಹೋಗದೇ ಎಲ್ಲೆಂದರಲ್ಲಿ ಬೀಳುತ್ತಿದ್ದರು.
ಫೆ 13ರಂದು ಪ್ರಕಾಶ ಬಡಿಗೇರ್ ಸಿಂಪಿಗಲ್ಲಿ ಅಂಗಡಿ ಬಳಿ ತೆರಳಿದ್ದರು. ಅಲ್ಲಿಯೇ ಅವರು ಮಲಗಿದ್ದರು. ಎಷ್ಟು ಹೊತ್ತಾದರೂ ಅಲ್ಲಿಂದ ಕದಲಲಿಲ್ಲ. ಈ ಬಗ್ಗೆ ಪರೀಕ್ಷಿಸಿದಾಗ ಅವರು ಅಲ್ಲಿಯೇ ಸಾವನಪ್ಪಿರುವುದು ಗಮನಕ್ಕೆ ಬಂದಿತು.
ಈ ವಿಷಯ ಅರಿತ ಅವರ ಪತ್ನಿ ರೇಖಾ ಬಡಿಗೇರ್ ಪೊಲೀಸರಿಗೆ ವರದಿ ಒಪ್ಪಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡರು.