ಅರಣ್ಯಹಕ್ಕು ಹೋರಾಟಗಾರರ ಬದುಕಿಗಾಗಿ ನ್ಯಾಯವಾದಿ ರವೀಂದ್ರ ನಾಯ್ಕ ನಡೆಸುತ್ತಿರುವ ಕಾನೂನಾತ್ಮಕ ಹೋರಾಟಕ್ಕೆ ಶುಕ್ರವಾರ ಮೊದಲ ಹಂತದ ಜಯ ಸಿಕ್ಕಿದೆ. ಅರಣ್ಯ ಹಕ್ಕು ಸಮಿತಿಯಲ್ಲಿ ನಾಮನಿರ್ದೇಶಿತ ಸದಸ್ಯರ ಅನುಪಸ್ಥಿತಿಯಲ್ಲಿ ನಡೆಯುತ್ತಿದ್ದ ಅರ್ಜಿ ವಿಚಾರಣೆಗೆ ತಡೆಯಾಜ್ಞೆ ಸಿಕ್ಕಿದೆ.
ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ರಾಜ್ಯ ಅರಣ್ಯ ಭೂಮಿ ಹಕ್ಕು ಮೇಲ್ವಿಚಾರಣಾ ಸಮಿತಿ 2024ರ ನ 28ರಂದು ಅರಣ್ಯವಾಸಿಗಳ ಅರ್ಜಿ ಮುಂದಿನ 2 ತಿಂಗಳಲ್ಲಿ ನಾಮನೀರ್ದೇಶಿತ ಸದಸ್ಯರ ಅನುಪಸ್ಥಿತಿಯಲ್ಲಿ ಪುನರ್ ಪರಿಶೀಲನಾ ಮಾಡಬೇಕೇಂಬ ನಡುವಳಿಕೆಗೆ ಹೋರಾಟಗಾರರ ವೇದಿಕೆಯು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲೀನಿ ರಜನೀಶ ಅವರಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿತ್ತು. ಇದಕ್ಕೆ ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿಯಲ್ಲಿ ಉಪವಿಭಾಗ ಹಾಗೂ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗಳಲ್ಲಿ ನಾಮನಿರ್ದೇಶಿತ ಸದಸ್ಯರ ಅನುಪಸ್ಥಿತಿಯಲ್ಲಿ ಅರಣ್ಯ ಹಕ್ಕು ತಿರಸ್ಕೃತ ಅರ್ಜಿಗಳನ್ನ ಪುನರ್ ಪರಿಶೀಲನಾ ಕಾರ್ಯವನ್ನು ಮುಂದಿನ ನಿರ್ದೇಶನದವರೆಗೆ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ. `ಅರಣ್ಯ ಹಕ್ಕು ಅರ್ಜಿಗಳಿಗೆ ಸಂಬoಧಿಸಿದoತೆ ಗ್ರಾಮ ಸಭೆಗಳನ್ನು ಕಾನೂನಿನಂತೆ ನಡೆಸಲು ಸರ್ಕಾರದ ಕಾರ್ಯದರ್ಶಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ರಂದೀಪ್ ಡಿ ಅವರು ಆದೇಶಿಸಿದ್ದಾರೆ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
`ಹಿಂದಿನ ನಿರ್ಣಯದಂತೆ ವಿವಿಧ ಅರಣ್ಯ ಭೂಮಿ ಹಕ್ಕು ಸಮಿತಿಯು ಅರ್ಜಿಗಳನ್ನು ಪುನರ್ ಪರಿಶೀಲನಾ ಕಾರ್ಯವು ಹೊಸ ಆದೇಶದಿಂದ ರಾಜ್ಯಾದಂತ ಪುನರ್ ಪರಿಶೀಲನಾ ಪ್ರಕ್ರಿಯೆ ಸ್ಥಗಿತವಾಗಿದೆ. ನಾಮನೀರ್ದೇಶಿತ ಸದಸ್ಯರ ಅನುಪಸ್ಥಿತಿಯಲ್ಲಿ ಅರ್ಜಿಗಳನ್ನು ಪುನರ್ ಪರಿಶೀಲಿಸುವದು ಅರಣ್ಯ ಹಕ್ಕು ಕಾಯಿದೆ ಉಲ್ಲಘಂನೆಯಾಗುತ್ತದೆ ಎಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ನೀಡಿದ ಅಭಿಪ್ರಾಯ ನೀಡಿರುವುದರಿಂದ ತಾಲೂಕಾ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ಆಗೂವರೆಗೂ ಅರ್ಜಿಗಳ ಪುನರ್ ಪರಿಶೀಲನೆ ಮುಂದಕ್ಕೆ ಹಾಕಲು ಹಾಗೂ ಮುಂದಿನ ನಿರ್ದೇಶನದವರೆಗೆ ಪರಿಶೀಲನಾ ಪ್ರಕ್ರಿಯೆ ತಡೆಹಿಡಿಯುವಂತೆ ಆದೇಶದಲ್ಲಿ ಉಲ್ಲೇಖಿಸಲ್ಪಟ್ಟಿದೆ’ ಎಂದು ರವೀಂದ್ರ ನಾಯ್ಕ ಅವರು ವಿವರಿಸಿದ್ದಾರೆ.
ಆಕ್ಷೇಪಣೆಗೆ ಮಾನ್ಯತೆ:
`ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯವಾಸಿಗಳಿಂದ ಸುಮಾರು 50 ಸಾವಿರ ಆಕ್ಷೇಪ ಪತ್ರಕ್ಕೆ ಕಾನೂನಾತ್ಮಕ ಮತ್ತು ಸಾಂಘಿಕ ಹೋರಾಟದ ಮೂಲಕ ರಾಜ್ಯಾದಂತ ವಿರೋಧ ವ್ಯಕ್ತಪಡಿಸಲಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸಮಿತಿಯು ಅರ್ಧದಷ್ಟು ನಾಮನಿರ್ದೇಶನ ಸದಸ್ಯರು ಅನುಪಸ್ಥಿತಿಯಲ್ಲಿ ಪುನರ್ ಪರಿಶೀಲನಾ ಪ್ರಕ್ರಿಯೆ ಜರುಗಿಸುವದು ಕಾನೂನುಬಾಹಿರ ಎಂದು ಹೋರಾಟಗಾರರ ವೇದಿಕೆಯ ಆಕ್ಷೇಪಣೆಗೆ ಮಾನ್ಯತೆ ದೊರಕಿದಂತಾಗಿದೆ’ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.