ಸ್ನೇಹಮಯ ಆಡಳಿತ ಮಂಡಳಿ, ಸೌಜನ್ಯದಿಂದ ವರ್ತಿಸುವ ಸಿಬ್ಬಂದಿ, ಸದಸ್ಯರ ಸಹಕಾರವೇ ಸೇಫ್ ಸ್ಟಾರ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತದ ಯಶಸ್ಸಿಗೆ ಕಾರಣ. `ಒಟ್ಟಿಗೆ ಬೆಳೆಯೋಣ’ ಎಂಬ ತತ್ವದ ಅಡಿ ಕಾರ್ಯ ನಿರ್ವಹಿಸುತ್ತಿರುವ ಈ ಸೊಸೈಟಿ ಜನರ ಅಗತ್ಯಕ್ಕೆ ಅನುಗುಣವಾಗಿ ಆರ್ಥಿಕ ಬೆಂಬಲ ನೀಡುವುದರೊಂದಿಗೆ ವರ್ಷದಿಂದ ವರ್ಷಕ್ಕೆ ಇನ್ನಷ್ಟು ವಿಸ್ತಾರವಾಗಿ ಬೆಳೆಯುತ್ತಿದೆ.
ಜನರ ಸಮಸ್ಯೆಗಳನ್ನು ಬಹುಬೇಗ ಅರ್ಥ ಮಾಡಿಕೊಂಡು ತ್ವರಿತ ರೀತಿಯಲ್ಲಿ ಸಾಲ ನೀಡುವ ವಿಷಯದಲ್ಲಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತ ಮುಂಚೂಣಿಯಲ್ಲಿದೆ. ಉಳಿತಾಯದ ಹಣ ಹೂಡಿಕೆ ಮಾಡಿದ ಠೇವಣಿದಾರರಿಗೆ ಸಹ ಆಕರ್ಷಕ ಬಡ್ಡಿ ನೀಡಿ ಹಣಕಾಸಿನ ಭದ್ರತೆಯನ್ನು ಈ ಸೊಸೈಟಿ ನೀಡುತ್ತಿದೆ. ಸೌಜನ್ಯದಿಂದ ವರ್ತಿಸುವ ಸಿಬ್ಬಂದಿ, ಕಷ್ಟದ ವೇಳೆ ಮಾನವೀಯ ನೆಲೆಯಲ್ಲಿ ನೆರವಾಗುವ ಆಡಳಿತ ಮಂಡಳಿಯವರು ಪರಸ್ಪರ ಸಹಕಾರದ ಮನೋಭಾವನೆಯಿಂದ ಸೊಸೈಟಿಯನ್ನು ಮುನ್ನಡೆಸುತ್ತಿದ್ದಾರೆ. ಸದಸ್ಯರು ಸಹ ಆರ್ಥಿಕ ಶಿಸ್ತು ಕಾಪಾಡಿಕೊಂಡು `ನಮ್ಮ ಸೊಸೈಟಿ ನಮ್ಮ ಹೆಮ್ಮೆ’ ಎಂದು ಮಾತನಾಡುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 2011ರ ಅವಧಿಯಲ್ಲಿ ಸೇಫ್ ಸ್ಟಾರ್ ಸೌಹಾರ್ದ ನಿಯಮಿತ ಸ್ಥಾಪನೆಯಾಯಿತು. ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸುಧಾರಣೆ ಹಾಗೂ ಬಡ-ಮಧ್ಯಮ ವರ್ಗದ ಜನರ ಆರ್ಥಿಕ ಸುಧಾರಣೆಗೆ ಯೋಜಿಸಿದ ಜಿ ಜಿ ಶಂಕರ್ ಅವರು ಆರ್ಥಿಕ ಸಂಸ್ಥೆಗೆ ಅಡಿಪಾಯ ಹಾಕಿದರು. ಸಂಸ್ಥಾಪಕ ಅಧ್ಯಕ್ಷರೇ ಈಗಲೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಸಹಕಾರಿ ತತ್ವದ ನಿಯಮಾವಳಿಗಳನ್ನು ಅಚ್ಚುಕಟ್ಟಾಗಿ ಪಾಲಿಸುವುದರ ಜೊತೆ ಜನರ ನೋವು-ನಲಿವಿಗೂ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಅಡಿಕೆ, ತೆಂಗು ಬೆಳೆಯ ಜೊತೆ ಮೀನುಗಾರಿಕೆಯನ್ನು ನಡೆಸುವ ಹೊನ್ನಾವರದ ಜನ ಆರ್ಥಿಕ ಸಂಕಷ್ಟದಲ್ಲಿದ್ದರು. ಅಲ್ಲಿನ ಹಣಕಾಸಿನ ಪರಿಸ್ಥಿತಿಯನ್ನು ಅರಿತ ಜಿ ಜಿ ಶಂಕರ್ ಅವರು ಜನರ ಅಭಿಲಾಶೆಗಳಿಗೆ ಸ್ಪಂದಿಸುವುದಕ್ಕಾಗಿ ಸೊಸೈಟಿಯನ್ನು ತೆರೆದರು. ಸ್ವಾವಲಂಭಿ ಬದುಕು ಅರೆಸುತ್ತಿರುವವರಿಗೆ ಆರ್ಥಿಕ ನೆರವು ನೀಡಿ ಅವರನ್ನು ಮುಖ್ಯವಾಹಿನಿಗೆ ತರುವುದು ಸೊಸೈಟಿಯ ಮೂಲ ಉದ್ದೇಶವಾಗಿತ್ತು. ಕೆಲವೇ ವರ್ಷಗಳಲ್ಲಿ ಸೊಸೈಟಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆ ವಿಸ್ತರಿಸಿಕೊಂಡು ಅನೇಕರಿಗೆ ನೆರವಾಯಿತು. ಈಚೆಗೆ ಇಲ್ಲಿನವರ ಸೇವೆ ನೋಡಿದ ಹೊರ ಜಿಲ್ಲೆಯ ಜನರು ಸೇಫ್ ಸ್ಟಾರ್ ಸೊಸೈಟಿಯ ಅಗತ್ಯವಿರುವ ಬಗ್ಗೆ ಬೇಡಿಕೆ ಸಲ್ಲಿಸಿದರು. ಅದರ ಪ್ರಕಾರ ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಈ ಸೊಸೈಟಿ ನೆರೆ ಜಿಲ್ಲೆಗಳಲ್ಲಿಯೂ ತನ್ನ ಕೈಗಳನ್ನು ವಿಸ್ತರಿಸಿತು. ಇದೀಗ ಶಿವಮೊಗ್ಗ, ಉಡುಪಿ ಜಿಲ್ಲೆ ಸೇರಿ 18 ಕಡೆ ಸೊಸೈಟಿಯ ಶಾಖೆಗಳಿವೆ.
ಸಾಕಷ್ಟು ಬ್ಯಾಂಕು, ಸೇವಾ ಸಹಕಾರಿ ಸಂಘಗಳಿದ್ದರೂ ಜನರಿಗೆ ಸಮಯಕ್ಕೆ ಸರಿಯಾಗಿ ಸಾಲ ಸಿಗುತ್ತಿರಲಿಲ್ಲ. ಹಣ ಇದ್ದವರಿಗೆ ಸಹ ಹೂಡಿಕೆಗೆ ಉತ್ತಮ ಜಾಗ ಗೊತ್ತಿರಲಿಲ್ಲ. ಸೇಫ್ ಸ್ಟಾರ್ ಸೌಹಾರ್ದ ನಿಯಮಿತ ಈ ಎರಡು ಸಮಸ್ಯೆಗೆ ಪರಿಹಾರ ಹುಡುಕಿತು. ರಾಷ್ಟ್ರೀಯ ಬ್ಯಾಂಕುಗಳಲ್ಲಿ ಅನುಸರಿಸುವ ಆರ್ಥಿಕ ಶಿಸ್ತನ್ನು ಅಳವಡಿಸಿಕೊಂಡರೂ ಅಲ್ಲಿನ ದೊಡ್ಡ ದೊಡ್ಡ ನಿಯಮಗಳು ಇಲ್ಲಿಲ್ಲ. ಕಾಗದ ಪತ್ರಗಳಿಗಾಗಿ ಅನಗತ್ಯ ಅಲೆದಾಟಕ್ಕೂ ಸೊಸೈಟಿ ಅವಕಾಶ ಮಾಡಿಕೊಡಲಿಲ್ಲ. ಸದಸ್ಯರಿಗೆ ಅಪಘಾತ ಪರಿಹಾರ ಸೇರಿ ಅನೇಕ ದೂರದೃಷ್ಠಿಯ ಯೋಜನೆಗಳು ಸೇಫ್ ಸ್ಟಾರ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿವೆ. `10 ವರ್ಷದವರಿಂದ ಹಿಡಿದು 70 ವರ್ಷದವರೆಗೂ ಈ ಸೊಸೈಟಿಯಲ್ಲಿ ವಿಮಾ ಸೌಲಭ್ಯವಿದೆ. ವಿಮಾ ಕಂತನ್ನು ಸೊಸೈಟಿಯಿಂದಲೇ ತುಂಬಿಕೊಳ್ಳುವ ಆಯ್ಕೆಗಳಿವೆ. ಏಳು ವರ್ಷದಲ್ಲಿ ಹೂಡಿಕೆ ಹಣ ದುಪ್ಪಟ್ಟು ಮಾಡುವ ಯೋಜನೆಯಿದೆ. ಮನೆ ಸಾಲ, ವಾಹನ ಖರೀದಿ ಸೇರಿ ಎಲ್ಲಾ ಬಗೆಯ ಸಾಲಗಳಿಗೂ ಸಂಸ್ಥೆಯವರು ಆರ್ಥಿಕ ನೆರವು ನೀಡುತ್ತಿದ್ದಾರೆ. ಈ ಕಾರಣದಿಂದಲೇ ರಾಜ್ಯ ಸೌಹಾರ್ದ ಸಹಕಾರಿ ನೀಡುವ ಶ್ರೇಷ್ಟ ಸಹಕಾರಿ ಪ್ರಶಸ್ತಿ ಸಹ ಸಿಕ್ಕಿದೆ’ ಎಂದು ಸೊಸೈಟಿಯ ಮುಖ್ಯ ವ್ಯವಸ್ಥಾಪಕ ಮಹೇಶ ಶೆಟ್ಟಿ ಹೆಮ್ಮೆಯಿಂದ ಹೇಳಿಕೊಂಡರು.
ಸೇಫ್ ಸ್ಟಾರ್ ಸೌಹಾರ್ದ ಸಹಕಾರಿಯ ಆಡಳಿತ ಮಂಡಳಿ ಸಹ ಅಷ್ಟೇ ಚುರುಕು. ಸೊಸೈಟಿ ಅಧ್ಯಕ್ಷ ಜಿ ಜಿ ಶಂಕರ್ ಉದ್ದಿಮೆದಾರರು. ಉಪಾಧ್ಯಕ್ಷ ನಾಗರಾಜ ಇಂದ್ರ ಅವರು ವೈದಿಕರು. ನಿರ್ದೇಶಕರಾದ ಗೋಪಾಲಕೃಷ್ಣ ಹೆಗಡೆ ಕೃಷಿಕರು, ಮಾರುತಿ ಗೌಡ ಗುತ್ತಿಗೆದಾರರು, ಸಂಪನ್ಮೂಲ ವ್ಯಕ್ತಿಯಾದ ಗುಣಮಾಲ ಇಂದ್ರ ಅವರು ಸಹ ಈ ಸೊಸೈಟಿಯ ನಿರ್ದೇಶಕರಾಗಿದ್ದಾರೆ. ನಿವೃತ್ತ ಪಿಡಿಓ ಗೋಪಾಲಕೃಷ್ಣ ಭಟ್ಟ, ಹಣಕಾಸು ಸಲಹೆಗಾರ ಲಿಫರ್ಡ ರೋಡ್ರಿಗ್ಸ್, ಸಾರಿಗೆ ಉದ್ಯಮಿ ರಾಜೇಶ ದೇಸಾಯಿ, ನಿವೃತ್ತ ಅಧಿಕಾರಿಗಳಾದ ಲಕ್ಷö್ಮಣ ಪಟಗಾರ, ಸುಬ್ರಾಯ ಭಟ್ಟ, ನರಸಿಂಹ ಪಟಗಾರ ಅವರು ಬ್ಯಾಂಕಿನ ಆರ್ಥಿಕ ಶಿಸ್ತಿನ ಅಡಿಗಲ್ಲುಗಳಾಗಿದ್ದಾರೆ. ಗುತ್ತಿಗೆದಾರರಾದ ಪಾತೋನ್ ಫರ್ನಾಂಡಿಸ್, ಉದ್ದಿಮೆದಾರ ನಾಗೇಶ ದೇವಾಡಿಗ, ಸಮಾಜ ಸೇವಕ ವೆಂಕಟ್ರಮಣ ಕಿಮಾನಿಕರ್ ಸಹ ಸೊಸೈಟಿಯ ನಿರ್ದೇಶಕರಾಗಿ ಆಧಾರ ಸ್ಥಂಬದoತೆ ಕಾರ್ಯನಿರ್ವಹಿಸುತ್ತಿದ್ದಾರೆ.
#Sponsored