6 Skip to content

ಗೋವಾದಿಂದ ಬಂದು ಗುದ್ದಿಹೋದ!

ಯಲ್ಲಾಪುರ: ಗೋವಾದ ಫೆರ್ನಲ್’ನಿಂದ ಯಲ್ಲಾಪುರಕ್ಕೆ ಬಂದಿದ್ದ ಅನೀಶ ದರ್ವಾಜಕರ್ ಎಂಬಾತ ಕಮ್ಮಾಣಿಯ ಸುಭಾಷ್ ಸಿದ್ದಿ (31 ವರ್ಷ) ಎಂಬಾತರ ಬೈಕಿಗೆ ತನ್ನ ಕಾರು ಗುದ್ದಿದ್ದಾನೆ.
ಜೂ 19ರಂದು ಸಂಜೆ ಸುಭಾಷ್ ಸಿದ್ದಿ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದ. ಎದುರಿನಿಂದ ಕಾರು ಚಲಾಯಿಸಿಕೊಂಡು ಬಂದ ಅನೀಶ ದರ್ವಾಜಕರ್ ಯಾವುದೇ ಸಿಗ್ನಲ್ ನೀಡದೇ ಬಲಕ್ಕೆ ತಿರುಗಿಸಿದ್ದು,
ಬೆಲ್ ರಸ್ತೆಯ ಉಪಖಜಾನೆ ಬಳಿ ಆತ ಬೈಕಿಗೆ ಗುದ್ದಿದ್ದಾನೆ. ಇದರಿಂದ ಬೈಕ್ ಓಡಿಸುತ್ತಿದ್ದ ಸುಭಾಷ ಸಿದ್ದಿಯ ತಲೆಯಿಂದ ರಕ್ತ ಬಂದಿದ್ದು, ಕಾಲು ಮುರಿದಿದೆ.

Leave a comment

Leave a Reply

You cannot copy content of this page