ಸ್ನೇಹಿತರ ಜೊತೆ ಉಳುವಿ ಪ್ರವಾಸಕ್ಕೆ ಬಂದಿದ್ದ ಹಾನಗಲ್’ನ ಸೋಮರಾಜ ಎಂ ಎಂ ಮರಕ್ಕೆ ಕಾರು ಗುದ್ದಿದ್ದಾರೆ. ಅಪಘಾತಕ್ಕೆ ಒಳಗಾದ ಐ 20 ಕಾರು ಅವರ ಮಾವನದ್ದಾಗಿದ್ದು, ಸಂಪೂರ್ಣ ಜಖಂ ಆಗಿದೆ.
ಫೆ 25ರಂದು ಹಾವೇರಿಯ ಹಾನಗಲ್’ನಿಂದ ಸೋಮರಾಜ ಎಂ ಎಂ ಹೊರಟಿದ್ದರು. ಅದೇ ಊರಿನ ಅಭಿಷೇಕ ಗೌಡ ಹಂಚಿನಮನೆ, ಮಂಜುನಾಥ ಲಕಡಿ, ಹರೀಶ ಹೆಗ್ಗಡದ ಹಾಗೂ ಸೊರಬದ ವೀರೇಂದ್ರ ಕೋಣಿಮನಿ ಆ ಕಾರಿನಲ್ಲಿದ್ದರು. ಶಿರಸಿ ಯಲ್ಲಾಪುರ ರಸ್ತೆ ಮಾರ್ಗವಾಗಿ ವೇಗವಾಗಿ ಬಂದ ಕಾರಿಗೆ ಎಲ್ಲಿಯೂ ಸಮಸ್ಯೆ ಆಗಲಿಲ್ಲ. ಹೀಗಾಗಿ ಹಳಿಯಾಳ ತಿರುವಿನಿಂದ ಮುಂದೆ ಕಾರನ್ನು ಇನ್ನಷ್ಟು ವೇಗವಾಗಿ ಓಡಿಸಿದರು.
ಅಂಬಿಕಾ ನಗರದಿಂದ 2ಕಿಮೀ ದೂರದ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿತು. ಅಲ್ಲಿದ್ದ ಮರಕ್ಕೆ ಕಾರು ಡಿಕ್ಕಿಯಾಗಿ ನುಚ್ಚು ನೂರಾಯಿತು. ಕಾರಿನ ಒಳಗಿದ್ದ ಸೋಮರಾಜ ಎಂ ಎಂ ಜೊತೆ ಎಲ್ಲರೂ ಗಾಯಗೊಂಡರು. ಎಲ್ಲರೂ ಆಸ್ಪತ್ರೆಗೆ ದಾಖಲಾದರು. ಇಷ್ಟು ದಿನಗಳ ಕಾಲ ಚಿಕಿತ್ಸೆಪಡೆದು ಚೇತರಿಸಿಕೊಂಡ ನಂತರ ಗಾಯಾಳು ಮಂಜುನಾಥ ಲಕ್ಕಡಿ ಹಳಿಯಾಳ ಪೊಲೀಸ್ ಠಾಣೆಗೆ ತೆರಳಿ ಅಪಘಾತದದ ವಿವರ ನೀಡಿದರು. ಅದರ ಪ್ರಕಾರ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಶುರು ಮಾಡಿದ್ದಾರೆ.