ಕಾರವಾರ ತಾಲೂಕಿನ ಕುಗ್ರಾಮಗಳಲ್ಲಿ ಒಂದಾದ ನಗೆ ಊರಿನ ಶಾಲೆಗೆ ಕೈಗಾ ಅಣು ವಿದ್ಯುತ್ ಘಟಕವೂ ಸಿಎಸ್‌ಆರ್ ಯೋಜನೆ ಅಡಿ 4 ಕೋಣೆ ನಿರ್ಮಿಸಲು ಮುಂದಾಗಿದೆ. ಮಂಗಳವಾರ ಕೈಗಾ ಅಧಿಕಾರಿಗಳು ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ.
ಊರಿಗೆ ಬಂದ ಅಧಿಕಾರಿಗಳನ್ನು ವಿದ್ಯಾರ್ಥಿನಿಯರು ಹಾಗೂ ಊರಿನ ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಂಡರು. ಕೈಗಾ ಯೋಜನೆಯ ಸ್ಥಾನಿಕ ನಿರ್ದೇಶಕರಾದ ಬಿ ವಿನೋದಕುಮಾರ, ಕೈಗಾ ಯೋಜನೆಯ 3-4 ರ ಸ್ಟೇಶನ್ ಡೈರೆಕ್ಟರ್ ಎಸ್ ಕೆ ಓಜಾ, ಕೈಗಾ ಸಿಎಸ್‌ಆರ್ ಅಧ್ಯಕ್ಷ ಎಸ್ ಜೆ ಟಿ ಸ್ವಾಮಿ, ಕೈಗಾ ಯುನಿಯನ್ ಅಧ್ಯಕ್ಷ ಜಗದೀಶ ಗುನಗಾ, ಕೈಗಾ ಯುನಿಯನ್‌ನ ಪ್ರಧಾನ ಕಾರ್ಯದರ್ಶಿ ರಾಜೇಶ ಕುಮಾರ ಪೈ, ಕೈಗಾ ಯೋಜನೆಯ ಇಂಜಿನೀಯರ್ ಸಾಯಿನಾಥ ನಾಯ್ಕ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂತೋಷ ಲೇಖಾ ಗೌಡ, ಕೈಗಾ ಯೋಜನೆಯ ಚಂದನ ನಾಯ್ಕ, ದಿನೇಶ ಗಾಂವಕರ, ಗ್ರಾಮದ ಮೊಕ್ತೇಸರರ ಪರವಾಗಿ ಕೇಶವ ಗಾಂವಕರ, ಗುನಗರಾದ ಏಕೇಶ ಗೌಡ, ತಿಮ್ಮ ಗೌಡ ಇತರರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
`ಶಾಲೆಯ ಶಿಕ್ಷಕರು ಅತ್ಯಂತ ಮುತುವರ್ಜಿವಹಿಸಿ ಕಟ್ಟಡ ಮಂಜೂರಿ ಮಾಡಿಸಿಕೊಂಡಿದ್ದಾರೆ. ಊರಿನವರ ಪ್ರೀತಿ ಸದಾ ಸ್ಮರಣೀಯ’ ಎಂದು ಕೈಗಾ ಯೋಜನೆಯ ಸ್ಥಾನಿಕ ನಿರ್ದೇಶಕ ಬಿ ವಿನೋದಕುಮಾರ ಹೇಳಿದರು. `ಊರಿನ ಪೃಕೃತಿ ಹಾಗೂ ದೇವರು ಪದೇ ಪದೇ ನಮ್ಮನ್ನು ಇಲ್ಲಿ ಕರೆಯಿಸಿಕೊಳ್ಳುತ್ತಿದೆ. ಶಾಲೆಯ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕೈಗಾ ಬದ್ಧವಾಗಿದೆ’ ಎಂದು ಕೈಗಾ 3-4 ಸ್ಟೇಶನ್ ಡೈರೆಕ್ಟರ್ ಎಸ್ ಕೆ ಓಜಾ ಹೇಳಿದರು.
ಸಿಎಸ್‌ಆರ್ ಅಧ್ಯಕ್ಷ ಎಸ್ ಜೆ ಟಿ ಸ್ವಾಮಿ ಮಾತನಾಡಿ `ಶಾಲೆಗೆ ಅಗತ್ಯ ಕಟ್ಟಡ ತರುವಲ್ಲಿ ಮುಖ್ಯಾಧ್ಯಾಪಕ ಅಖ್ತರ ಸೈಯದ್, ಎಸ್‌ಡಿಎಂಸಿ ಅಧ್ಯಕ್ಷೆ ಲಲಿತಾ ಗೌಡ, ಉಪಾಧ್ಯಕ್ಷೆ ಲಕ್ಷಿö್ಮÃ ಗೌಡ, ಸದಸ್ಯರಾದ ಮಹೇಶ ಗೌಡ, ಕೇಶವ ಗೌಡ ಅವರ ಶ್ರಮ ಅಪಾರ. ಶಾಸಕ ಸತೀಶ್ ಸೈಲ್ ಸಹ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು. ಕಟ್ಟಡ ಕಾಮಗಾರಿ ಗುತ್ತಿಗೆದಾರ ಪ್ರಕಾಶ ಗಾವಸ್ಕರ, ಮುಖ್ಯಾಧ್ಯಾಪಕ ಅಖ್ತರ ಸೈಯದ್, ಕೈಗಾ ಯೋಜನೆಯ ಶಿಕ್ಷಕಿ ಪ್ರಿಯಾ ಲಾಂಜೇಕರ ಹಾಗೂ ಶಾಲಾ ಸಹಶಿಕ್ಷಕಿ ರೂಪಾ ನಾಯ್ಕ ವೇದಿಕೆಯಲ್ಲಿದ್ದರು. ಮೋನಿಕಾ, ಶಶಿಕಲಾ, ಲಕ್ಷಿ ತಂಡದವರು ಸ್ವಾಗತ ಗೀತೆ ಹಾಡಿದರು. ಶರತ ಗೌಡ, ಶಶಿಕಲಾ ಗೌಡ ಪ್ರಾರ್ಥಿಸಿದರು. ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರ ಜೊತೆ ಸ್ಥಳೀಯ ಜನಪ್ರತಿನಿಧಿಗಳು, ಊರಿನ ಮುಖಂಡರು ಇದ್ದರು.