ಮರ ಏರಲು ಪ್ರಯತ್ನಿಸಿದ ಚಿರತೆ ದಾಂಡೇಲಿ ಕಾಡಿನಲ್ಲಿ ಆಯತಪ್ಪಿ ನೆಲಕ್ಕೆ ಬಿದ್ದಿದೆ. ಪರಿಣಾಮ ಚಿರತೆಯ ಹಿಂಬಾಗಕ್ಕೆ ಪೆಟ್ಟಾಗಿದೆ.
ದಾಂಡೇಲಿಯ ಮೌಳಂಗಿ ಅರಣ್ಯ ವ್ಯಾಪ್ತಿಯ ಕೊಂಡವಾ ಬಳಿ ಚಿರತೆ ಗಾಯಗೊಂಡಿದೆ. ಇದನ್ನು ನೋಡಿದ ಊರಿನ ಜನ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ. ನಿತ್ರಾಣಗೊಂಡಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ರಕ್ಷಿಸಿದ್ದಾರೆ. ಅಂದಾಜು ಒಂದುವರೆ ವರ್ಷದ ಚಿರತೆ ಇದಾಗಿದ್ದು, ಮರದಿಂದ ಬಿದ್ದ ಪ್ರಕರಣ ಅಪರೂಪದಲ್ಲಿಯೇ ಅಪರೂಪ.
ಗಾಯಗೊಂಡ ಚಿರತೆಗೆ ಪಶು ವೈದ್ಯಾಧಿಕಾರಿ ಡಾ ಅರ್ಚನಾ ಚಿಕಿತ್ಸೆ ನೀಡಿದ್ದಾರೆ. ಚಿರತೆಯ ಬೆನ್ನು ಹಾಗೂ ಕಾಲಿಗೂ ನೋವಾಗಿದೆ. ಮೌಳಂಗಿ ಅರಣ್ಯಾಧಿಕಾರಿ ಆನಂದ ರಾಥೋಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅರಣ್ಯ ಸಿಬ್ಬಂದಿ ಈ ಚಿರತೆಯ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ.