ಶಿರಸಿ ಸ್ಮಶಾನದಲ್ಲಿ `ನೆಮ್ಮದಿ ಕುಟೀರ’ ಸ್ಥಾಪಿಸಿ ರಾಜ್ಯದಲ್ಲಿಯೇ ಮಾದರಿ ವ್ಯವಸ್ಥೆ ಮಾಡಲಾಗಿದೆ. ಸದ್ಯ ಸದ್ಯ ಇದಕ್ಕೆ ಪೂರಕವಾಗಿ `ಅಭಿಮನ್ಯು ಮುಕ್ತಿ ವಾಹನ’ ಸೇರ್ಪಡೆಯಾಗಿದೆ.
ಶಿರಸಿಯಲ್ಲಿ ಸೋಮವಾರದಿಂದ ಅಭಿಮನ್ಯು ಮುಕ್ತಿ ವಾಹನ ಸೇವೆಗೆ ಸಿದ್ಧವಾಗಿದೆ. ಈ ವಾಹನದಲ್ಲಿ ಅತ್ಯಂತ ಉಪಯೋಗಿ ಹಾಗೂ ಅಗತ್ಯ ವಿನ್ಯಾಸವನ್ನು ಅಳವಡಿಸಲಾಗಿದೆ. ಸ್ಟೇನ್ಲೆಷ್ಟಿಲ್ ಟ್ರೋಲಿ ಮೇಲೆ ಹೋಗುವಂತಹ ಗಾಲಿಗಳನ್ನು ಹೊಂದಿದ ಸ್ಟ್ರೇಚರನ್ನು ಸಹ ಮುಕ್ತಿ ವಾಹನದಲ್ಲಿದೆ.
ಮುಕ್ತಿ ವಾಹನದಲ್ಲಿ ರಾಮ ಭಜನೆ!
ವಾಹನದ ಎರಡು ಕಡೆಗಳಲ್ಲಿಯೂ ಗಾಜು ಅಳವಡಿಸಲಾಗಿದೆ. ಮೇಲಿರುವ ಗಾಜಿನ ಭಾಗದಿಂದ ಗಾಳಿ ಆಡುವಂತೆ ಮಾಡಲಾಗಿದೆ. ರಾತ್ರಿ ವೇಳೆಗಾಗಿ ಉತ್ತಮ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೆ `ಶ್ರೀ ರಾಮ್ ಜೈ ರಾಮ್.. ಜೈ ಜೈ ರಾಮ್.. ರಾಮ್ ಸತ್ಯ’ ಎನ್ನುವ ಧ್ವನಿ ವರ್ಧಕ ಸಹ ಈ ಮುಕ್ತಿ ವಾಹನದಲ್ಲಿದೆ.
ಇನ್ನೂ ಈ ಮುಕ್ತಿ ವಾಹನದ ಒಳಗೆ ಐವರು ಕೂರುವ ಆಸನ ವ್ಯವಸ್ಥೆಯಿದೆ. ಅಭಿಮನ್ಯು ಯುವಕ ಮಂಡಳದ ಲಾಂಚನದೊ0ದಿಗೆ ಡಾ ಭಾಸ್ಕರ್ ಸ್ವಾದಿ ಟ್ರಸ್ಟಿನ ಹೆಸರು-ಸಹಾಯವಾಣಿ ಸಂಖ್ಯೆಯನ್ನು ನಮೂದಿಸಲಾಗಿದೆ. ಮುಕ್ತಿ ವಾಹನದ ನಿರ್ವಹಣೆಗಾಗಿ ಜನ ಸಾಮಾನ್ಯರು ನೆರವು ನೀಡುವ ಅವಕಾಶವಿದ್ದು, ವಾಹನದ ಎರಡು ಕಡೆಗಳಲ್ಲಿಯೂ ಅಭಿಮನ್ಯು ಯುವಕ ಮಂಡಳಿಯ ಬ್ಯಾಂಕ್ ಖಾತೆಯ ಕ್ಯೂಆರ್ ಕೋಡ್ ಅಂಟಿಸಲಾಗಿದೆ.
ಅಭಿಮನ್ಯು ಯುವಕ ಮಂಡಳಿಯ ಸ್ವಯಂ ಸೇವಕರ ಪಡೆ ಈ ವಾಹನವನ್ನು ನಿರ್ವಹಣೆ ಮಾಡಲಿದ್ದಾರೆ. ಇದಕ್ಕಾಗಿ ಅಲ್ಲಿನ ಯುವಕರು ಸಾಕಷ್ಟು ಶ್ರಮಿಸುತ್ತಿದ್ದಾರೆ.