ಕಾರವಾರದ ಚಿತ್ತಾಕುಲ ಬಳಿ `ವೆಲ್ಡಿಂಗ್ ವರ್ಡ’ ನಡೆಸುತ್ತಿದ್ದ ಸುನೀಲಕುಮಾರ್ ಮೂಗಿನಿಂದ ರಕ್ತ ಕಾರಿಕೊಂಡು ಸಾವನಪ್ಪಿದ್ದಾರೆ.
ಕೇರಳದ ಸುನೀಲಕುಮಾರ್ (51) ಕಳೆದ 20 ವರ್ಷಗಳಿಂದ ಚಿತ್ತಾಕುಲದ ಗಾಂವಗೇರಿಯಲ್ಲಿ `ವೆಲ್ಡಿಂಗ್ ವರ್ಡ’ ನಡೆಸುತ್ತಿದ್ದರು. ಫೆ 28ರಂದು ಅವರಿಗೆ ಮೂಗಿನಿಂದ ರಕ್ತ ಬಂದಿತ್ತು. ಅನಾರೋಗ್ಯದ ಬಗ್ಗೆ ಕೇರಳದಲ್ಲಿರುವ ಅವರ ಅಣ್ಣ ವಿಕೆ ಸಿಬಿ ಫೋನ್ ಮಾಡಿ ಮಾಹಿತಿ ನೀಡಿದ್ದರು.
ಅಲ್ಲಿನ ಸುಖ ಸಾಗರ ಕಾಂಪ್ಲೇಕ್ಸಿನಲ್ಲಿ ಸುನೀಲಕುಮಾರ ಬಾಡಿಗೆ ಮನೆ ಮಾಡಿಕೊಂಡಿದ್ದರು. ಅವರು ಅಲ್ಲಿ ಒಂಟಿಯಾಗಿ ವಾಸವಾಗಿದ್ದರು. ಫೆ 4ರಂದು ಮನೆಗೆ ಹೋದ ಅವರು ಅಲ್ಲಿಯೇ ಸಾವನಪ್ಪಿದರು. ಫೆ 5ರಂದು ಸುನೀಲಕುಮಾರ ಅವರು ಸಾವನಪ್ಪಿದ್ದು ಅರಿವಿಗೆ ಬಂದಿದೆ.
ಮೂಗಿನಿAದ ರಕ್ತ ಕಾರಿಕೊಂಡ ಅವರು ಹೃದಯಘಾತದಿಂದ ಸಾವನಪ್ಪಿದ ಬಗ್ಗೆ ಅವರ ಸಹೋದರ ವಿಕೆ ಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.