ಹಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ನವೀನ ಚೌಹಾಣ್ ಎಂಬಾತ ಗಾಂಜಾ ಸಾಗಾಟದ ವೇಳೆ ಶಿರಸಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಆತನಿಗೆ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆತನ ಸಹಚರ ಗಣೇಶನಗರದ ನಿಖಿಲ ಗೌಡರಿಗೂ ಜೈಲು ಖಾಯಂ ಆಗಿದೆ.
ಶಿರಸಿ ಆನೆಹೊಂಡದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದಾಗ ಪಿಎಸ್‌ಐ ರತ್ನಾ ಕುರಿ ದಾಳಿ ನಡೆಸಿದ್ದರು. ಈ ಪ್ರಕರಣದ ಕುರಿತು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿದ್ದು, ವಿವರವಾದ ವಿಚಾರಣೆ ನಡೆಯಿತು. ಪ್ರದಾನ ಜಿಲ್ಲಾ ನ್ಯಾಯಾಧೀಶ ವಿಜಯಕುಮಾರ ವಾದ ಆಲಿಸಿದರು.
ಸರ್ಕಾರಿ ನ್ಯಾಯವಾದಿ ತನುಜಾ ಹೊಸಪಟ್ಟಣ ಅವರ ವಾದ ಆಲಿಸಿದ ನ್ಯಾಯಾಧೀಶರು ತಪ್ಪಿತಸ್ಥರಿಗೆ ಶಿಕ್ಷೆ ಪ್ರಕಟಿಸಿದರು. ಆರೋಪಿತರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದರು. ಜೊತೆಗೆ 20 ಸಾವಿರ ರೂ ದಂಡ ಪಾವತಿಸುವಂತೆಯೂ ಆದೇಶಿಸಿದರು.