ಜೊಯಿಡಾ – ದಾಂಡೇಲಿ ರಸ್ತೆ ಅಂಚಿನಲ್ಲಿ ಆನೆ ಕಾಣುವುದು ಸಾಮಾನ್ಯ. ಆದರೆ, ಗುರುವಾರ ಹುಲಿಯೊಂದು ತನ್ನ ಮರಿಯೊಂದಿಗೆ ರಸ್ತೆ ದಾಟಿರುವುದನ್ನು ಹಲವು ವಾಹನ ಸವಾರರು ನೋಡಿದ್ದಾರೆ.
ಗಣೇಶಗುಡಿ-ದಾಂಡೇಲಿ-ಬಾರ್ಚಿ ರಸ್ತೆಯಲ್ಲಿ ಪಟ್ಟೆ ಹುಲಿ ರಸ್ತೆ ದಾಟಿದೆ. ಈ ವೇಳೆ ವಾಹನ ಸವಾರರು ವಾಹನ ನಿಲ್ಲಿಸಿ ಫೋಟೋ ತೆಗೆದಿದ್ದಾರೆ. ಯಾರೂ ಹುಲಿ ಮುಂದೆ ಹೋಗುವ ದುಸ್ಸಾಹಸ ಮಾಡಿಲ್ಲ. ಹೀಗಾಗಿ ತನ್ನಷ್ಟಕ್ಕೆ ತಾನಾಗಿ ಆ ಹುಲಿ ಮರಿಯೊಂದಿಗೆ ಕಾಡು ಸೇರಿದೆ.
ಈ ಭಾಗದಲ್ಲಿ ಚಿರತೆ, ಹುಲಿ, ಆನೆ ಸೇರಿ ಹಲವು ವನ್ಯಜೀವಿಗಳಿವೆ. ಆದರೆ, ಹಗಲಿನಲ್ಲಿ ಹೀಗೆ ಹುಲಿ ಮರಿ ಜೊತೆ ಕಾಣಿಸಿಕೊಂಡಿದ್ದು ಅಪರೂಪ. ಹೀಗಾಗಿ ಕಾಳಿ ನದಿ ಪ್ರವಾಸಕ್ಕೆ ತೆರಳುತ್ತಿದ್ದವರು ಈ ಚಿತ್ರ ಸೆರೆ ಹಿಡಿದಿದ್ದಾರೆ.







