6
September 29, 2026

ಶೆಂಗಾ ಮಾರುವ ಮಹಿಳೆಗೆ ಬೆದರಿಕೆ: ಫೈನಾನ್ಸ್ ಸಿಬ್ಬಂದಿಗೆ ಇದೀಗ ನಡುಕ!

ಶೆಂಗಾ ವ್ಯಾಪಾರದಿಂದ ಬದುಕು ಕಟ್ಟಿಕೊಂಡಿದ್ದ ಕುಮಟಾ ಮಹಿಳೆಗೆ ಬೆದರಿಸಿದ ಫೈನಾನ್ಸ್ ಸಿಬ್ಬಂದಿಗೆ ಕಾನೂನು ಕುಣಿಕೆ ಸುತ್ತಿಕೊಂಡಿದೆ. ಅದರಿಂದ ಹೊರಬರುವುದಕ್ಕಾಗಿ ಫೈನಾನ್ಸಿ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಪಟ್ಟಣದ ಚಿತ್ರಿಗಿಯ ಕಲ್ಲುಗುಡ್ಡದ ಪವಿತ್ರಾ ನಾಯ್ಕ (40) ವ್ಯಾಪಾರಕ್ಕೆ ಸಾಲ ಮಾಡಿದ್ದರು. ಸಾಲದ ಕಂತು ಮರುಪಾವತಿಸುವಂತೆ ಚೈತನ್ಯ ಫೈನಾನ್ಸ್ ವ್ಯವಸ್ಥಾಪಕ ನಾಗೇಂದ್ರ ಗೌಡ, ಸಿಬ್ಬಂದಿ ರಮೇಶ ಗೊಂಡ ಗಂಟು ಬಿದ್ದಿದ್ದರು. ಇದಕ್ಕಾಗಿ ಖಾಲಿ ಚೆಕ್ ನೀಡುವಂತೆ ಒತ್ತಾಯಿಸುತ್ತಿದ್ದರು. ಪವಿತ್ರಾ ನಾಯ್ಕ ತಮ್ಮ ಸಮಸ್ಯೆ ಹೇಳಿಕೊಂಡರೂ ಫೈನಾನ್ಸ ಸಿಬ್ಬಂದಿ ಅದನ್ನು ಆಲಿಸಿರಲಿಲ್ಲ.

ಭಾರತೀಯ ಸಂಯುಕ್ತ ಸಂಸ್ಥೆ ಫೈನಾನ್ಸ್ ವ್ಯವಸ್ಥಾಪಕ ಪ್ರೇಮಾನಂದ ನಾಯ್ಕ, ಸಿಬ್ಬಂದಿ ಜ್ಯೋತಿ ನಾಯ್ಕ ಮತ್ತು ಸ್ಪಂದನ ಫೈನಾನ್ಸ್ನ ಮದನ ಮಡಿವಾಳ ಅವರ ಮನೆಗೆ ಹೋಗಿ ತೊಂದರೆ ನೀಡಿದ್ದರು. ಸಾಲದ ಕಂತು ತುಂಬಲು ಸಾಧ್ಯವಾಗದಿದ್ದರೆ ಮನೆಯ ಕಾಗದ ಪತ್ರ ಮತ್ತು ಸಹಿ ಮಾಡಿದ ಖಾಲಿ ಚೆಕ್ ಕೊಡುವಂತೆ ಒತ್ತಾಯಿಸಿದ್ದರು. ಈ ಹಿನ್ನಲೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

You cannot copy content of this page