ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿರುವ ಡಾ ಜಿ ಜಿ ಹೆಗಡೆ ಅವರು `ಗುಣಮಟ್ಟದ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ’ ಎಂದು ಪ್ರತಿಪಾದಿಸಿದವರು. ಈ ಹಿನ್ನಲೆ ಅವರು ಕುಮಟಾದ ಗೋರೆಯಲ್ಲಿ ಕೆನರಾ ಎಕ್ಸಲೆನ್ಸ್ ಕಾಲೇಜು ಶುರು ಮಾಡಿದರು. ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಆ ಕಾಲೇಜು ಮೂರು ವರ್ಷದೊಳಗೆ ದೊಡ್ಡ ಹೆಮ್ಮರವಾಗಿ ಬೆಳೆದಿದೆ.
ಮೌಲ್ಯಾಧಾರಿತ ಶಿಕ್ಷಣದ ಜೊತೆ ಸಂಸ್ಕಾರವನ್ನು ಕಲಿಸಿಕೊಡುವಲ್ಲಿ ಕೆನರಾ ಎಕ್ಸಲೆನ್ಸ್ ಕಾಲೇಜು ಮೊದಲ ಪಂಕ್ತಿಯಲ್ಲಿದೆ. ಪಠ್ಯದ ಜೊತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿ ನಾನಾ ವಿಭಾಗಗಳಲ್ಲಿ ಇಲ್ಲಿನ ಮಕ್ಕಳು ಸಾಕಷ್ಟು ಸಾಧನೆ ಮಾಡಿದ್ದಾರೆ. ಪ್ರತಿ ವಿಷಯದಲ್ಲಿಯೂ ಅತ್ಯಂತ ಪ್ರಬುದ್ಧತೆಯನ್ನು ಹೊಂದಿದ ಉಪನ್ಯಾಸಕರು, ಸೌಜನ್ಯದಿಂದ ವರ್ತಿಸುವ ಸಿಬ್ಬಂದಿ ಈ ಕಾಲೇಜಿನ ಯಶಸ್ಸಿಗೆ ಮೂಲ ಕಾರಣ.

ಉತ್ತರ ಕನ್ನಡ ಜಿಲ್ಲೆಯೆಂದರೆ ನಿಸರ್ಗ ರಮಣೀಯ ತಾಣ. ಅದರಲ್ಲಿಯೂ ಕರಾವಳಿಯ ಸಮುದ್ರ ಹಾಗೂ ಮಲೆನಾಡಿನ ಬೆಟ್ಟ ಗುಡ್ಡಗಳನ್ನು ಹೊಂದಿದ ಕುಮಟಾ ಪ್ರಕೃತಿ ಆರಾಧಕರ ತವರೂರು. ಅಲ್ಲಿನ ಗೋರೆ ಗುಡ್ಡ ಶ್ರೀ ಗೋಪಾಲಕೃಷ್ಣ ದೇವರ ಆರಾಧ್ಯ ಕ್ಷೇತ್ರ. ಇಂಥ ಪರಿಸರದಲ್ಲಿ ಪಡೆದ ಶಿಕ್ಷಣ ವಿದ್ಯಾರ್ಥಿಗಳ ಪಾಲಿಗೆ ಎಂದಿಗೂ ಮರೆಲಾಗದ ಅನುಭೂತಿ ನೀಡುವುದು ಸಹಜ. ಹೀಗಾಗಿ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಅರೆಸಿ ಇಲ್ಲಿಗೆ ಬರುತ್ತಾರೆ. ಹೀಗೆ ಬರುವ ಪ್ರತಿ ವಿದ್ಯಾರ್ಥಿಯ ಬಗ್ಗೆಯೂ ವೈಯಕ್ತಿಕ ಕಾಳಜಿವಹಿಸಿ ಅವರಿಗೆ ಜ್ಞಾನಧಾರೆಯೆರೆಯುವುದರಲ್ಲಿ ಕೆನರಾ ಎಕ್ಸಲೆನ್ಸ್ ಕಾಲೇಜು ಆಡಳಿತ ಮಂಡಳಿ ಶ್ರಮಿಸುತ್ತಿದೆ.
ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಸ್ಥಾಪನೆಯಾದ 2021ರ ಅಕ್ಟೋಬರ್ 1ರ ದಿನ ಶಿಕ್ಷಣ ಕ್ಷೇತ್ರಕ್ಕೆ ಹೊಸ ಮೈಲುಗಲ್ಲು. ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಜೊತೆ ಎರಡು ವರ್ಷ NEET, JEE, CET, CA, CS ಫೌಂಡೇಶನ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು ಸಹ ಈ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ. ವಿಶೇಷ ಪರಿಣತಿಪಡೆದಿರುವ ನುರಿತ ತಜ್ಞರು ಈ ಕಾಲೇಜಿಗೆ ಆಗಮಿಸಿ ವಿವಿಧ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತಾರೆ. ಅಗತ್ಯ ತರಬೇತಿಯನ್ನು ನೀಡಿ ಪ್ರೋತ್ಸಾಹಿಸುತ್ತಾರೆ. ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಿರುವ ಯೋಗ, ಧ್ಯಾನ, ಪ್ರಾಣಾಯಾಮ, ಭಜನೆ, ಶ್ಲೋಕ, ಭಗವದ್ಗೀತಾ ಪಠಣಗಳಿಗೂ ಈ ಕಾಲೇಜು ಒತ್ತು ನೀಡಿದೆ.

ಶ್ರೀ ಜಿ ಎನ್ ಹೆಗಡೆ ಟ್ರಸ್ಟ್ (ರಿ) ಅಡಿ ನಡೆಯುತ್ತಿರುವ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ವ್ಯವಸ್ಥೆಯಿದೆ. ಶುದ್ಧ ಸಾತ್ವಿಕ ಆಹಾರವನ್ನು ಮಕ್ಕಳಿಗೆ ಉಣಬಡಿಸಲಾಗುತ್ತದೆ. ಸ್ವತಃ ವೈದ್ಯರಾಗಿರುವ ಕಾರಣ ಡಾ ಜಿ ಜಿ ಹೆಗಡೆ ಅವರು ಪ್ರತಿ ಮಕ್ಕಳ ಆರೋಗ್ಯದ ಬಗ್ಗೆ ಅಪಾರ ಕಾಳಜಿಹೊಂದಿದ್ದು, ಗುಣಮಟ್ಟದ ಶಿಕ್ಷಣದ ಜೊತೆ ವಿದ್ಯಾರ್ಥಿಗಳ ಆರೋಗ್ಯದ ವಿಷಯದಲ್ಲಿ ಇಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವವರಿಲ್ಲ. `ಜ್ಞಾನವೆಂದರೆ ಶಾಸ್ತ್ರ ಮತ್ತು ಆಚಾರ್ಯೋಪದೇಶದಿಂದ ಉಂಟಾಗುವ ಆತ್ಮ ತತ್ವದ ತಿಳುವಳಿಕೆ. ಅಂಥ ಜ್ಞಾನ, ಶಿಕ್ಷಣ ಹಾಗೂ ಸಂಸ್ಕಾರದ ಜೊತೆ ದೊರೆತಾಗ ವಿದ್ಯಾರ್ಥಿಗಳ ವ್ಯಕ್ತಿತ್ವ ಅತ್ಯುತ್ತಮವಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಕುಮಟಾದ ಗೋರೆಯ ಕೆನರಾ ಎಕ್ಸಲೆನ್ಸ್ ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ’ ಎಂದು ಡಾ ಜಿ ಜಿ ಹೆಗಡೆ ಹೆಮ್ಮೆಯಿಂದ ಮಾತನಾಡಿದರು.

`SSLC ಮುಗಿದ ನಂತರ ಯಾವ ಕಾಲೇಜು ಸೂಕ್ತ ಎಂದು ಹುಡುಕಾಟ ನಡೆಸಿದಾಗ ಕೆನರಾ ಎಕ್ಸಲೆನ್ಸ್ ಕಾಲೇಜು ಕಾಣಿಸಿತು. ಅಲ್ಲಿ ಪ್ರವೇಶ ಪಡೆದಿರುವುದರಿಂದ ನನ್ನ ಜೀವನದ ದಿಕ್ಕು ಬದಲಾಯಿತು’ ಎಂದು ಈ ಕಾಲೇಜಿನ ಮಾಜಿ ವಿದ್ಯಾರ್ಥಿನಿ ವೈಶಾಲಿ ಭಟ್ಟ ಅನಿಸಿಕೆ ಹಂಚಿಕೊ0ಡರು. CA ಪೌಂಡೇಶನ್ ಪರೀಕ್ಷೆಯ ಮೊದಲ ಹಂತವನ್ನು ಪ್ರಥಮ ಪ್ರಯತ್ನದಲ್ಲಿಯೇ ಮುಗಿಸಿ ಸಾಧನೆ ಮಾಡಿದ ದಾಖಲೆ ವೈಶಾಲಿ ಭಟ್ಟ ಅವರದ್ದು. JEE ಮೇನ್ಸ್’ನಲ್ಲಿ ರಾಜ್ಯಕ್ಕೆ 9ನೇ ಸ್ಥಾನಪಡೆದಿರುವ ಕುಮಾರ ಭಟ್ಟ ಸಹ ಇದೇ ಕಾಲೇಜಿನ ವಿದ್ಯಾರ್ಥಿ. ಇದರೊಂದಿಗೆ ವಾಣಿಜ್ಯ, CS ಪೌಂಡೇಶನ್, ವೈದ್ಯಕೀಯ ವಿಭಾಗ, ವಿವಿಧ ಎಂಜಿನಿಯರಿ0ಗ್ ಕಾಲೇಜು ಹಾಗೂ ಕೆಸಿಇಟಿಗೆ ಸಹ ಈ ಕಾಲೇಜಿನ ಮೂಲಕ ಅನೇಕರು ಆಯ್ಕೆಯಾಗಿದ್ದಾರೆ.
ಅಂದ ಹಾಗೇ, 4ನೇ ವರ್ಷದ ಕಾಲೇಜು ಪ್ರವೇಶ ಶುರುವಾಗಿದೆ. ಉತ್ತಮ ಭವಿಷ್ಯಕ್ಕಾಗಿ ಆರೋಗ್ಯಕರ ಶಿಕ್ಷಣ ಬಯಸುವವರಿಗೆ ಕೆನರಾ ಎಕ್ಸಲೆನ್ಸ್ ಕಾಲೇಜು ಸದಾ ಸ್ವಾಗತಿಸುತ್ತದೆ.
ಇಲ್ಲಿ ಭೇಟಿ ಕೊಡಿ:
ಕೆನರಾ ಎಕ್ಸಲೆನ್ಸ್ ಕಾಲೇಜು
ಗೋರೆ, ಪೋಸ್ಟ: ಧಾರೇಶ್ವರ
ಕುಮಟಾ ತಾಲೂಕು, ಉತ್ತರ ಕನ್ನಡ ಜಿಲ್ಲೆ
ಇಲ್ಲಿ ಫೋನ್ ಮಾಡಿ:
9663119845
9986580703
9449477473 ಅಥವಾ 948206380
#Sponsored