ಬುಡಕಟ್ಟು ಸಮುದಾಯಕ್ಕೆ ಸೇರಿದ ಸಿದ್ದಿ ಜನ ಸಾಕಷ್ಟು ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಮಾರ್ಚ 24ರಂದು ಜಿಲ್ಲೆಯ ಎಲ್ಲಾ ತಾಲೂಕಿನ ಸಿದ್ದಿ ಜನರಿಂದ ಏಕಕಾಲಕ್ಕೆ ಸರ್ಕಾರಕ್ಕೆ ಪತ್ರ ರವಾನೆಯಾಗಲಿದೆ.
ಅರಣ್ಯ ಹಕ್ಕು ಯೋಜನೆಯಡಿ ನೀಡಿದ ಹಕ್ಕುಪತ್ರದಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರಿಪಡಿಸುವುದು ಈ ಹೋರಾಟ ಮುಖ್ಯ ಉದ್ದೇಶವಾಗಿದೆ. ಸಿದ್ದಿ ಸಮುದಾಯದವರು ಹೆಚ್ಚಾಗಿ ಅರಣ್ಯ ಭೂಮಿಯನ್ನೇ ಅವಲಂಬಿಸಿದ್ದು, ಅವರೆಲ್ಲರ ಭೂಮಿ ಸಕ್ರಮ ಆಗಬೇಕು ಎಂಬುದು ಮುಖ್ಯ ಬೇಡಿಕೆ.
ಸಿದ್ದಿ ಸಮುದಾಯದವರಲ್ಲಿ ಶಿಕ್ಷಣ ಕೊರತೆ ಹೆಚ್ಚಿದೆ. ಹೀಗಾಗಿ ಉಳಿದ ಸಮುದಾಯದವರಿಗೆ ಸ್ಪರ್ಧೆ ನೀಡಿ ಉದ್ಯೋಗಪಡೆಯುವುದು ಕಷ್ಟ. ಇದರಿಂದ ಸಿದ್ದಿ ಸಮುದಾಯದವರಿಗೆ ಶೇ 5ರಷ್ಟು ಒಳ ಮೀಸಲಾತಿ ನೀಡಬೇಕು ಎಂಬುದು ಎರಡನೇ ಬೇಡಿಕೆ. ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ಹಣ ಮೀಸಲಿಡಬೇಕು ಎಂಬುದು ಇನ್ನೊಂದು ಬೇಡಿಕೆ.
ಅರಣ್ಯದಲ್ಲಿವಾಸವಿರುವ ಸಿದ್ದಿ ಸಮುದಾಯದವರಿಗೆ ಸಾಕಷ್ಟು ಅರಣ್ಯ ಜ್ಞಾನವಿರುವುದರಿಂದ ಅರನ್ಯ ಇಲಾಖೆಯ ವಾಚ್‌ಮೆನ್ ಹಾಗೂ ಗಾರ್ಡ ಹುದ್ದೆ ಒದಗಿಸಬೇಕು ಎಂದು ಸಹ ಸಮುದಾಯದವರು ಆಗ್ರಹಿಸಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಅಧ್ಯಕ್ಷ ಬೆನಿತ್ ಸಿದ್ದಿ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಪ್ರಮುಖರಾದ ಜಾನ್ ಕೋಸ್ತಾ ಸಿದ್ದಿ, ಲಾರೆನ್ಸ್ ಸಿದ್ದಿ, ಪಾತಿಮಾ ಸಿದ್ದಿ, ಸಂತೋಷ ಜಾನ್ ಬಿಳ್ಕಿಕರ ಇದ್ದರು.