ಕಂಪ್ಯುಟರ್ ಜೊತೆ ಶೀಘ್ರಲಿಪಿ ಬರಹ ತರಗತಿಗಳನ್ನು ನಡೆಸುವ ಕಾರವಾರದ `ದಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ’ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.
2025ರ ಫೆಬ್ರವರಿ ಮಾಸದಲ್ಲಿ ಪರೀಕ್ಷೆ ನಡೆದಿತ್ತು. ಕಾರವಾರ ನಗರದ ರಾಧಾಕೃಷ್ಣ ದೇವಸ್ಥಾನದ ಬಳಿ ನಡೆಯುವ ತರಗತಿಗೆ ಹಾಜರಾದ ಮೇಧನ್ ಮೋಹನ ಅಂಬಿಗ, ನರ್ಮತಾ ಮಹಾಬಲೇಶ್ವರ ಗೌಡ, ರಿಯಾ ವಿನಾಯಕ ರಾಯ್ಕರ, ಸಫಾ ಶಫಿ ಶೇಖ್, ಅಶ್ವಿಲ್ ಅಂತಿಮಸ್ ಫರ್ನಾಂಡಿಸ್, ಕೃತಿಕಾ ಸುಬ್ರಾಯ ನಾಯ್ಕ, ನಿಕಿತಾ ಮೋಟಾ ಗುನಗಿ, ಅರ್ಫಿಯಾ ಶೇಖ್, ರತ್ನ ಎನ್ ಅವರು ಅತ್ಯುನ್ನತ ಆಫೀಸ್ ಆಟೋಮೆಷನ್ ವಿಭಾಗದಲ್ಲಿ ಅತ್ಯುನ್ನತ ದರ್ಜೆಯಲ್ಲಿ ಪಾಸಾಗಿದ್ದಾರೆ.
ಇದರೊಂದಿಗೆ ಇಲ್ಲಿನ 16 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ ಒಬ್ಬರು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಕಂಪ್ಯೂಟರ್ ಗ್ರಾಫಿಕ್ ಡಿಸೈನರ್ ವಿಭಾಗದಲ್ಲಿ ಮಿಸ್ಭಾಹ ಠಾಕೂರ್, ಚೈತನ್ಯ ಕೃಷ್ಣ ಗೊಂಡ, ಪ್ರೀಯಾ ಶ್ರೀಕಾಂತ್ ಕೇಣಿಕರ್, ನಿಶಾ ದತ್ತಾತ್ರೇಯ ಕಿಂದಳಕರ್ ಅವರು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿ ಸಾಧನೆ ಮಾಡಿದ್ದಾರೆ.
ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ದಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ಹೆಮ್ಮೆ ಹೆಚ್ಚಿಸಿದ ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಚಾರ್ಯ ಪ್ರಸನ್ನ ತೆಂಡೂಲ್ಕರ್ ಅವರು ಶುಭಹಾರೈಸಿದರು.





