ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾಗಿದ್ದ ಕಾರವಾರದ ವಿ ವಿ ಪಾತರಫೇಕರ ಅವರು ಸೋಮವಾರ ಬೆಳಿಗ್ಗೆ ಸಾವನಪ್ಪಿದ್ದಾರೆ. ಪುಟ್ಟಪರ್ತಿಯ ತಮ್ಮ ಮಗನ ಮನೆಯಲ್ಲಿ ಅವರು ಕೊನೆಉಸಿರೆಳೆದಿದ್ದಾರೆ.
ಕಾರವಾರ ನಗರದ ಹಿಂದೂ ಹೈಸ್ಕೂಲ್‌ನಲ್ಲಿ ವಿ ವಿ ಪಾತರಫೇಕರ ಅವರು ಶಿಕ್ಷಕರಾಗಿದ್ದರು. ನಿವೃತ್ತಿ ನಂತರ ಸಂಪೂರ್ಣವಾಗಿ ಆಧ್ಯಾತ್ಮದ ಕಡೆ ವಾಲಿದ್ದರು. ಸಾಯಿ ಭಕ್ತರಾಗಿದ್ದ ಅವರು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಜಿಲ್ಲಾಧ್ಯಕ್ಷರಾಗಿ ಹಲವು ಜನಪರ ಕೆಲಸ ಮಾಡಿದ್ದರು.
ಹೊನ್ನಾವರದ ಅರೆ ಅಂಗಡಿಯ ಶಾಲೆ ನಿರ್ಮಾಣದಲ್ಲಿ ವಿ ವಿ ಪಾತರಫೇಕರ ಅವರ ಕೊಡುಗೆ ಅಪಾರವಾಗಿತ್ತು. ವಿವಿದ ಸಮಿತಿಗಳ ರಚನೆ, ಭಝನಾ ಮಂಡಳಿಗಳಿಗೆ ನಿರಂತರ ಭೇಟಿ, ಆಧ್ಯಾತ್ಮ ತರಬೇತಿ, ಬಾಲ ವಿಕಾಸ ಮಕ್ಕಳಿಗೆ ಬಹುಮಾನಗಳ ಪ್ರಾಯೋಜಕತ್ವ ಸೇರಿ ಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.