ಶಿರಸಿ ನಗರದಲ್ಲಿ ಮಾರ್ಚ 30ಕ್ಕೆ ಯುಗಾದಿ ಉತ್ಸವ ಸಮಿತಿಯಿಂದ ಮೆರವಣಿಗೆ ಆಯೋಜಿಸಲಾಗಿದೆ. ಈ ಸಂಘಟನೆ 27ನೇ ವರ್ಷದ ಯುಗಾದಿ ಉತ್ಸವ ಆಚರಿಸುತ್ತಿದ್ದು, ಅತ್ಯಂತ ಸಡಗರದ ಸಿದ್ಧತೆ ನಡೆಯುತ್ತಿದೆ.
ಪ್ರತಿಯೊಬ್ಬರ ಮನೆಗೂ ಅಕ್ಷತೆ ನೀಡಿ ಹಬ್ಬದ ಮೆರವಣಿಗೆಗೆ ಆಮಂತ್ರಿಸಲು ಸಮಿತಿ ನಿರ್ಧರಿಸಿದೆ. ಇದರೊಂದಿಗೆ ಭಗವಾನ್ ಧ್ವಜವನ್ನು ಸಹ ನೀಡಲಾಗುತ್ತದೆ. ಪ್ರತಿ ಮನೆಯಿಂದ ಒಬ್ಬರಾದರೂ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುತ್ತಿದೆ. ಅತ್ಯಂತ ಅಚ್ಚುಕಟ್ಟಾಗಿ ಶೋಭಾಯಾತ್ರೆ ನಡೆಸಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ.
ಮಾರ್ಚ 30ರಂದು ವಿಕಾಸಾಶ್ರಮದಿಂದ ಶೋಭಾಯಾತ್ರೆಗೆ ಚಾಲನೆ ಸಿಗಲಿದೆ. 60ಕ್ಕೂ ಅಧಿಕ ಬಂಡಿಗಳು ಭಾಗವಹಿಸಲಿದೆ. ಆಕರ್ಷಕ ಬಂಡಿಗಳಿಗೆ ಮೂರು ಬಹುಮಾನಗಳಿವೆ. `ನಾವೆಲ್ಲರೂ ಹಿಂದು ನಾವೆಲ್ಲ ಒಂದು’ ಎನ್ನುವ ರೀತಿಯಲ್ಲಿ ಕೇಸರಿ ಧ್ವಜಕ್ಕೆ ಮಾತ್ರ ಮೆರವಣಿಗೆಯಲ್ಲಿ ಅವಕಾಶ ನೀಡಲಾಗುತ್ತದೆ. ಪೌರಾಣಿಕ ಮತ್ತು ಭಕ್ತಿ ಪ್ರಧಾನ ಬಂಡಿಗಳಿಗೆ ಮಾತ್ರ ಸ್ವಾಗತವಿದ್ದು, ಉತ್ಸವದ ಯಶಸ್ಸಿಗೆ ಇನ್ನಿತರ ರೂಪಕಗಳನ್ನು ತಯಾರಿಸಲಾಗಿದೆ.
ಈ ಎಲ್ಲಾ ವಿಷಯಗಳ ಬಗ್ಗೆ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ರಮೇಶ ದುಬಾಶಿ ಮಾಹಿತಿ ನೀಡಿದರು. ಮಂಗಳವಾರ ಯುಗಾದಿ ಉತ್ಸವದ ಕರಪತ್ರವನ್ನು ಅವರು ಬಿಡುಗಡೆ ಮಾಡಿದರು. ಪ್ರಮುಖರಾದ ಚಂದ್ರು ಎಸಳೆ, ಸುರೇಶ ಶೆಟ್ಟಿ, ಮಾಹಾಂತೇಶ ಹಾದಿಮನೆ, ರಾಧಿಕ ನಾಯ್ಕ, ಅಂಜಲಿ ಭಟ್ಟ ಜೊತೆಗಿದ್ದರು.







