ಉತ್ತರ ಕನ್ನಡ ಜಿಲ್ಲೆಯಲ್ಲಿ ಹೇರಳ ಪ್ರಮಾಣದಲ್ಲಿ ಬೆಳೆಯುವ ಕಾಳು ಮೆಣಸಿಗೆ ಶಿರಸಿಯಲ್ಲಿ ಉತ್ತಮ ಮಾರುಕಟ್ಟೆಯಿದೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದ ಶಿರಸಿ ಮಾರುಕಟ್ಟೆಯ ಹೆಸರು ಇದೀಗ ಸ್ಪೈಸ್ ಬೋರ್ಡಿನಲ್ಲಿ ದಾಖಲಾಗಿದೆ.
ದೇಶದಲ್ಲಿ ಕಾಳುಮೆಣಸಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಶಿರಸಿ ಮಾರುಕಟ್ಟೆಯ ದರವನ್ನು ಸ್ಪೈಸ್ ಬೋರ್ಡ್ನ ದರಪಟ್ಟಿಯಲ್ಲಿ ದಾಖಲಿಸುವಂತೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದ್ದರು. ಸಂಸದರ ಮನವಿಗೆ ಸ್ಪಂದಿಸಿ ಅವರು ಶಿರಸಿ ಮಾರುಕಟ್ಟೆಯ ಪ್ರಾಮುಖ್ಯತೆಯನ್ನು ಗುರುತಿಸಿದ್ದಾರೆ. ಹೀಗಾಗಿ ಇನ್ಮುಂದೆ ಸ್ಪೈಸ್ ಬೋರ್ಡ್ನ ದಿನನಿತ್ಯದ ದರಪಟ್ಟಿಯಲ್ಲಿ ಶಿರಸಿಯ ಹೆಸರು ಕಾಣಲಿದೆ. ಜೊತೆಗೆ ಕಾಳು ಮೆಣಸಿನ ದರವೂ ನಮೂದಾಗಲಿದೆ
ಸ್ಪೈಸ್ ಬೋರ್ಡ್ ದರಪಟ್ಟಿಯಿಂದ ಯಾರಿಗೆ ಲಾಭ?
ಸ್ಪೈಸ್ ಬೋರ್ಡ್ ದರಪಟ್ಟಿ ಅಂತರಾಷ್ಟಿಯ ಮಾರುಕಟ್ಟೆಯೊಂದಿಗೆ ಸಂಬoಧಹೊoದಿದೆ. ಶಿರಸಿ ಕಾಳು ಮೆಣಸಿನ ದರ ಇಲ್ಲಿ ಕಾಣುವುದರಿಂದ ಕಾಳು ಮೆಣಸು ಖರೀದಿಗೆ ಇನ್ನಷ್ಟು ಪೈಪೋಟಿ ನಡೆಯಲಿದೆ. ಇದರಿಂದ ಕಾಳು ಮೆಣಸಿನ ದರ ಸಹ ಏರಿಕೆಯಾಗುವ ಸಾಧ್ಯತೆಯಿದ್ದು, ಸ್ಪರ್ಧಾತ್ಮಕ ಬೆಲೆ ಸಿಗಲಿದೆ.
ಈ ನಿರ್ಧಾರದಿಂದ ಶಿರಸಿ ಹಾಗೂ ಸುತ್ತಮುತ್ತಲ ಪ್ರದೇಶದ ಕಾಳುಮೆಣಸು ಬೆಳೆಗಾರರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಬೆಲೆಗಳ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಮಾರುಕಟ್ಟೆಯ ಸ್ಪರ್ಧಾತ್ಮಕತೆಗೂ ಈ ವಿಧಾನ ಸಹಕಾರಿಯಾಗಲಿದೆ. ಶಿರಸಿಯ ಕದಂಬ ಮಾರ್ಕೆಟಿಂಗ್‌ನಲ್ಲಿ ನಡೆದ ಕಾಳುಮೆಣಸಿನ ಹಬ್ಬದಲ್ಲಿ ಕಾಳು ಮೆಣಸಿನ ದರವನ್ನು ಸ್ಪೈಸ್ ಬೋರ್ಡ್ ದರಪಟ್ಟಿಗೆ ಅಳವಡಿಸುವ ಬೇಡಿಕೆ ಕೇಳಿ ಬಂದಿತ್ತು. ಈ ಹಿನ್ನಲೆ ಸಂಸದ ಕಾಗೇರಿ ಆ ಬಗ್ಗೆ ಪ್ರಯತ್ನಿಸಿದ್ದರು.





