ಎಲ್ಲವೂ ಸರಿಯಾಗಿದ್ದರೆ ಅನಾಧಿಕಾಲದಿಂದಲೂ ಅರಣ್ಯ ಅತಿಕ್ರಮಿಸಿಕೊಂಡು ಬಂದ ಪ್ರತಿಯೊಬ್ಬರಿಗೂ ಆ ಭೂಮಿಯ ಹಕ್ಕು ಪತ್ರ ಸಿಗಬೇಕಿತ್ತು. ಸರ್ಕಾರದ ದಂಧ್ವ ನೀತಿಯಿಂದಾಗಿ ಅರಣ್ಯ ಭೂಮಿ ಸಾಗುವಳಿದಾರರಿಗೆ ಈವರೆಗೂ ಪಟ್ಟಾ ಸಿಕ್ಕಿಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ 1113 ಗ್ರಾಮ ಅರಣ್ಯ ಸಮಿತಿಗಳಿವೆ. ಆದರೆ, ಸಮಿತಿಯಲ್ಲಿನ ಲೋಪ, ಸಮಿತಿ ಸದಸ್ಯರಲ್ಲಿನ ಕಾನೂನು ತಿಳುವಳಿಕೆ ಕೊರತೆ ಸೇರಿ ಹಲವು ಕಾರಣಗಳಿಂದ ಅರಣ್ಯ ಅತಿಕ್ರಮಣದಾರರು ಈವರೆಗೂ ಅನಧಿಕೃತ ಸಾಗುವಳಿದಾರರಾಗಿಯೇ ಉಳಿದಿದ್ದಾರೆ. ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾದ ಅರ್ಜಿಗಳ ಪೈಕಿ 2.47 ಲಕ್ಷ ಅರ್ಜಿ ಕಾನೂನುಬಾಹಿರವಾಗಿ ವಿಲೇವಾರಿಯಾಗಿದ್ದು, ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಶಿರಸಿಯಲ್ಲಿ ಗುರುವಾರ ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
`ಅರಣ್ಯ ಅತಿಕ್ರಮಣದಾರರಿಗೆ ಸೂಕ್ತ ಕಾನೂನು ತಿಳುವಳಿಕೆ ಕೊಡುವುದು ಸರ್ಕಾರದ ಹೊಣೆಯಾಗಿತ್ತು. ಆದರೆ, ಸರ್ಕಾರ ಜನ ಜಾಗೃತಿ ಮೂಡಿಸದ ಕಾರಣ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಜಾಥಾ ಮೂಲಕಅರಿವು ಮೂಡಿಸುವ ಕೆಲಸ ಮಾಡುತ್ತಿದೆ’ ಎಂದು ಸಂಘಟನೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
`ಅರಣ್ಯ ಹಕ್ಕು ಕಾಯಿದೆಯಲ್ಲಿ ಪಾರಂಪರಿಕ ಅರಣ್ಯವಾಸಿಗಳಿಗೆ ಭೂಮಿ ಹಕ್ಕಿಗೆ ಸಂಬAಧಿಸಿ ಮೂರು ತಲೆಮಾರಿನ ದಾಖಲೆ ಅವಶ್ಯಕತೆ ಇಲ್ಲ. ಈ ಕುರಿತು ಅರಣ್ಯ ಹಕ್ಕು ಕಾಯಿದೆ, ಕೇಂದ್ರ ಸರ್ಕಾರದ ಸುತ್ತೋಲೆ ಮತ್ತು ನ್ಯಾಯಾಲಯದ ಆದೇಶಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲ್ಪಟ್ಟಿದೆ’ ಎಂದ ಅವರು ದಾಖಲೆಗಳನ್ನು ಪ್ರದರ್ಶಿಸಿದರು.
`ನಿರ್ದಿಷ್ಟವಾದ ವಯಕ್ತಿಕ ದಾಖಲೆಯ ನಮೂನೆ ಒತ್ತಾಯಿಸುವುದು ಕಾನೂನುಬಾಹಿರ. ಅರಣ್ಯವಾಸಿಯ ಸಾಗುವಳಿ ಪ್ರದೇಶದಲ್ಲಿ ಸಾಂಪ್ರದಾಯಿಕ ಕಟ್ಟಡ, ಬಾವಿ, ಸ್ಮಶಾನ, ಪ್ರಾಚೀನ ಮತ್ತು ನೈಸರ್ಗಿಕ ಕುರುಹುಗಳು, ಗ್ಯಾಜೇಟ ಮುಂತಾದ ಜನವಸತಿ ಪ್ರದೇಶದ ದಾಖಲೆ ಅವಲಂಭಿಸಿ ಹಕ್ಕುಪತ್ರ ನೀಡುವಂತೆ ಗುಜರಾತ ಉಚ್ಚನ್ಯಾಯಾಲಯ ಆದೇಶಿಸಿದೆ’ ಎಂಬ ಮಾಹಿತಿಯನ್ನು ಅವರು ನೀಡಿದರು.
ಪ್ರಮಖರಾದ ಚಂದ್ರು ಶಾನಭಾಗ, ರಾಜು ನರೇಬೈಲ್, ನೆಹರು ನಾಯ್ಕ, ರಮೇಶ ಮರಾಠಿ, ನಾಗರಾಜ ದೇವಸ್ಥಳ್ಳಿ, ಕಲ್ಪನಾ, ಯಶೋದË ನೌಟೂರ್, ಗಂಗೂಬಾಯಿ ರಜಪೂತ್, ಶಿವು ಗೌಡ ಕೊಟೆಕೊಪ್ಪ, ಶಿವಾನಂದ ನಾಯ್ಕ ಮಾಳಂಜಿ, ಮಲ್ಲೇಶಿ ಸಂತೋಳ್ಳಿ, ಪಂಪಾವತಿ ಮುಕ್ರಿ ಚರ್ಚೆಯಲ್ಲಿದ್ದರು.





