ಆಯುರ್ವೇದ ಪದ್ಧತಿಯ ಮೂಲಕ ಆರೋಗ್ಯ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿರವ ರೆವಿಂಟೊ ಲೈಫ್ ಸೈನ್ಸ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿದೆ. 2004ರಲ್ಲಿ ಶುರುವಾದ ಈ ಕಂಪನಿ 6 ದೇಶಗಳಿಗೆ ವೈದ್ಯಕೀಯ ಉತ್ಪನ್ನ ರವಾನಿಸುತ್ತಿದೆ. ಇದರ ಮುಂದುವರೆದ ಭಾಗವಾಗಿ ಕಾರವಾರದಲ್ಲಿ ಮಾರ್ಚ 21ರಿಂದ ಆಯುರ್ವೇದ ಆಸ್ಪತ್ರೆಯ ಸೇವೆಯನ್ನು ನೀಡಲು ಸಿದ್ಧವಾಗಿದೆ.
ರೆವೆಂಟೋ ಲೈಫ್ ಸೈನ್ಸ್ ಪ್ರೈವೇಟ್ ಕಂಪನಿಯ ಡಾ ಜೀತೇಂದ್ರ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ರೆವಿಂಟೊ ಲೈಫ್ ಸೈನ್ಸ್’ನ್ನು 2004ರಲ್ಲಿ 8 ಉದ್ಯೋಗಿಗಳಿಂದ ಶುರುವಾಯಿತು. ಇದೀಗ 6 ದೇಶಗಳಿಗೆ ಉತ್ಪನ್ನ ರಪ್ತು ಮಾಡುವಷ್ಟರ ಮಟ್ಟಿಗೆ ಕಂಪನಿ ಬೆಳೆದಿದೆ. 15 ಸಾವಿರಕ್ಕೂ ಅಧಿಕ ವೈದ್ಯರಿಗೆ ಕಂಪನಿ ಸಹಕಾರ ನೀಡುತ್ತಿದೆ. ಈ ಕಂಪನಿ ಮೆಡ್‌ಸ್ಕ್ವೇರ್ ಎಂಬ ಹೊಸ ರೀತಿಯ ವೈದ್ಯಕೀಯ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾಗಿದೆ’ ಎಂದವರು ವಿವರಿಸಿದರು.
`ಕ್ಲಿನಿಕ್ ಜೊತೆಗೆ ಫಾರ್ಮಸಿ ನಿರ್ಮಾಣ, ಆಯುರ್ವೇದ ಔಷಧಿ ವಿತರಣೆ ಜೊತೆ ಉಚಿತ ವೈದ್ಯರ ಸಮಾಲೋಚನೆಗೂ ಕಂಪನಿ ಆಸಕ್ತಿವಹಿಸಿದೆ. ಮುಂದಿನ ಮೂರು ವರ್ಷದಲ್ಲಿ 100ಕ್ಕೂ ಅಧಿಕ ನಗರದಲ್ಲಿ ಆಸ್ಪತ್ರೆ ಹಾಗೂ ಔಷಧಾಲಯ ಸ್ಥಾಪಿಸುವ ಗುರಿಯಿದೆ’ ಎಂದರು.

ಕಾರವಾರದ ಮುರಳಿಧರಮಠ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮೆಡ್‌ಸ್ಕ್ವೇರ್’ನ್ನು ಶಾಸಕ ಸತೀಶ ಸೈಲ್ ಮಾ 21ರ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಎಂಎಲ್‌ಸಿ ಗಣಪತಿ ಉಳ್ವೇಕರ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಡಿಎಚ್‌ಒ ಡಾ.ನೀರಜ, ಪ್ರಕೃತಿ ಗ್ರೂಪ್‌ನ ಚೆರಮನ ಎಂ ಆರ್ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ’ ಎಂಬ ವಿಷಯ ತಿಳಿಸಿದರು. ಉದ್ಯಮಿ ವಿಜಯ ಕುಮಾರ ಶೆಟ್ಟಿ ಜೊತೆಗಿದ್ದರು.